HomeEntertainmentಚಂದನವನದ ಸಂಭ್ರಮಗಳಿಗೆ ಸೀಮಿತವಾದ ಎಂ. ಎಂ. ಬಿ ಲೆಗಸಿ ಸಭಾಂಗಣಕ್ಕೆ ಮೊದಲ ವರ್ಷದ ಸಂಭ್ರಮ! ಸಡಗರದ...

ಚಂದನವನದ ಸಂಭ್ರಮಗಳಿಗೆ ಸೀಮಿತವಾದ ಎಂ. ಎಂ. ಬಿ ಲೆಗಸಿ ಸಭಾಂಗಣಕ್ಕೆ ಮೊದಲ ವರ್ಷದ ಸಂಭ್ರಮ! ಸಡಗರದ ನಡುವಲ್ಲಿ ಅನಾವರಣವಾಯಿತು ಮೈ ಮೂವೀ ಬಜಾರ್ ಪ್ರಶಸ್ತಿಯ ಲೋಗೋ

ಕನ್ನಡ ಚಿತ್ರರಂಗದ ಇವೆಂಟ್ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸುಸಜ್ಜಿತವಾದ ಸಭಾಂಗಣ MMB legacy ಆರಂಭವಾಗಿ ಒಂದು ವರ್ಷಗಳಾಗಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ಎಂ.ಎಂ.ಬಿ ಲೆಗಸಿಯ ಮುಖ್ಯಸ್ಥ ನವರಸನ್ ಅದ್ದೂರಿ ಸಮಾರಂಭ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಮೈ ಮೂವೀ ಬಜಾರ್ ಪ್ರಶಸ್ತಿ ಲೋಗೊ ಸಹ ಅನಾವರಣವಾಯಿತು.

ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್, ಚಂದನ್ ಶೆಟ್ಟಿ, ಸಂಜನಾ ಆನಂದ್, ಅಪೂರ್ವ ಸೇರಿ ಮೈ ಮೂವೀ ಬಜಾರ್ ನ‌ ಪ್ರಶಸ್ತಿ ಅನಾವರಣ ಮಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಮಾಜಿ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಭಾ.ಮ.ಹರೀಶ್, ನಿರ್ಮಾಪಕರಾದ ಸಂಜಯ್ ಗೌಡ, ರಮೇಶ್ ರೆಡ್ಡಿ, ದೇವೇಂದ್ರ, ಭಾ.ಮ.ಗಿರೀಶ್, ಜಗದೀಶ್, ಕೃಷ್ಣ ಸಾರ್ಥಕ್, ರಾಜೇಶ್, ಗಿರೀಶ್ ಕುಮಾರ್, ಗೋವಿಂದರಾಜು, ಚೇತನ್ ಗೌಡ, ರವಿರಾಜ್, ಶ್ರೀನಿವಾಸ್ (ಹೈದರಾಬಾದ್) ಹಾಗೂ ನಿರ್ದೇಶಕರಾದ ಹರಿ ಸಂತು, ಮಹೇಶ್ ಕುಮಾರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಪ್ರೋತ್ಸಾಹದ ಮಾತುಗಳ ಮೂಲಕ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ನವರಸನ್, MMB legacy ಕಳೆದವರ್ಷ ನವೆಂಬರ್ ನಲ್ಲಿ ಆರಂಭವಾಗಿತ್ತು. ಈ ಒಂದು ವರ್ಷದಲ್ಲಿ ಪತ್ರಿಕಾಗೋಷ್ಠಿಗಳು ಹಾಗೂ ಹಲವಾರು ಇವೆಂಟ್ ಗಳು ಸೇರಿದಂತೆ 216 ಕಾರ್ಯಕ್ರಮಗಳು ನಡೆದಿದೆ. ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಅನುಕೂಲವಾಗುವಾಗಲೆಂದು ಯೋಚಿಸಿ ಈ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಸಭಾಂಗಣ ನಿರ್ಮಿಸಲು ಜಾಗ ನೀಡಿದ ಆನಂದ್ ಅವರಿಗೆ, ಸಹಕಾರ ನೀಡುತ್ತಿರುವ ಚಿತ್ರೋದ್ಯಮದ ಗಣ್ಯರಿಗೆ ಹಾಗೂ ಮಾಧ್ಯಮದ ಮಿತ್ರರಿಗೆ ಧನ್ಯವಾದ. ಇಂತಹ ಸುಂದರ ಸಭಾಂಗಣಗಳನ್ನು ಬೆಂಗಳೂರು ಅಷ್ಟೇ ಅಲ್ಲದೇ ಮುಂಬೈ ಮುಂತಾದ ಕಡೆ ತೆರೆಯುವ ಆಲೋಚನೆ ಇದೆ.

ದೇಶದ ಎಲ್ಲಾ ಚಿತ್ರರಂಗಗಳ ಬಗ್ಗೆ ಮಾಹಿತಿಯನ್ನು ನೀಡುವ APP ಒಂದನ್ನು ಬಿಡುಗಡೆ ಮಾಡುವ ಸಿದ್ದತೆ ಕೂಡ ನಡೆಯುತ್ತಿದೆ. ಡಿಸೆಂಬರ್ 16 ರಂದು ಬಿಡದಿ ಬಳಿಯ ಜಾಲಿವುಡ್ ನಲ್ಲಿ ಮೈ ಮೂವೀ ಬಜಾರ್ ನ ಮೊದಲ ವರ್ಷದ ಪ್ರಶಸ್ತಿ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಳೆದ‌ ನಲವತ್ತು, ಐವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿರುವ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈಗಿನ ಕಲಾವಿದರು ಹಿರಿಯ ನಟರನ್ನು ಗೌರವಿಸಲಿದ್ದಾರೆ ಎಂದು ತಿಳಿಸಿದರು.

RELATED ARTICLES

Most Popular

Share via
Copy link
Powered by Social Snap