ಗಾಳಿಪಟ -2 ನಲ್ಲಿ ಶರ್ಮಿಳಾ ಮಾಂಡ್ರೆ ಅವರ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ಈ ಹಿಂದೆ ‘ಮಿರತ್ತಲ್’ ಎಂಬ ತಮಿಳು ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದ ಶರ್ಮಿಳಾ ಈಗ ಮತ್ತೊಮ್ಮೆ ತಮಿಳಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ‘ಮರ್ಡರ್ ಲೈವ್’ ಸಿನಿಮಾದ ಮೂಲಕ.
‘ಮರ್ಡರ್ ಲೈವ್’ ಚಿತ್ರವನ್ನು ಮುರುಗೇಶ್ ಅವರು ನಿರ್ದೇಶನ ಮಾಡಿದ್ದು, ಇದೊಂದು ಸೈಕಾಲಜಿ ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದೆ.
ವಿನಯ್ ರೈ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಹಾಲಿವುಡ್ ನಟಿ ನವೋಮಿ ವಿಲ್ಲೋ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸೈಕೋ ಕಿಲ್ಲರ್ ಮಾಡುವ ಸರಣಿ ಕೊಲೆಯ ಸುತ್ತ ಚಿತ್ರ ಸಾಗುತ್ತದೆ.
‘ಬ್ಲೈಂಡ್ ಡೇಟ್’, ‘ಸ್ಕೈ ಹೈ’, ‘ಗ್ಲಿಚ್’ ಮುಂತಾದ ಹಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿಕೋ ಮಾಸ್ತೋರಾಕಿಸ್ ಕಥೆಯನ್ನು ಆಧರಿಸಿ ಕಥೆ ಹೆಣೆಯಲಾಗಿದೆ.
ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ.

