ಡಾರ್ಲಿಂಗ್ ಕೃಷ್ಣ ಅವರ ‘ಮಿಸ್ಟರ್.ಬ್ಯಾಚುಲರ್’ ಸಿನಿಮಾ ತೆರೆಗೆ ಬರಲಿದೆ. ರಿಲೀಸ್ ಆಗಿರುವ ಸಿನಿಮಾದ ಟ್ರೇಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಬ್ಯಾಚುಲರ್ ಹುಡುಗನೊಬ್ಬನ ಮನಸ್ಸಿನ ಯಾನವನ್ನು ತೋರಿಸಲಾಗಿದ್ದು, ಡಾರ್ಲಿಂಗ್ ಕೃಷ್ಣ ಬ್ಯಾಚುಲರ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ನಿಮಿಕಾ ರತ್ನಾಕರ್ ಹಾಗೂ ಮಿಲನಾ ನಾಗರಾಜ್ ಅವರು ಕಾಣಿಸಿಕೊಂಡಿದ್ದಾರೆ. ಬ್ಯಾಚುಲರ್ ಜೀವನದ ಸಂಕಟ, ಸಮಸ್ಯೆಯನ್ನು ಫನ್ ಆಗಿ ಸಿನಿಮಾದ ಟ್ರೇಲರ್ ನಲ್ಲಿ ಮೂಡಿ ಬಂದಿದೆ.
“ಮಿ. ಬ್ಯಾಚುಲರ್’ ಸಿನಿಮಾದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ವಿಜಯ ಪ್ರಕಾಶ್ ಮೊದಲಾದ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಜ.6 ರಂದು ರಾಜ್ಯಾದ್ಯಂತ ಸಿನಿಮಾ ನೂರಕ್ಕೂ ಹೆಚ್ಚಿನ ಥಿಯೇಟರ್ ನಲ್ಲಿ ಗ್ರ್ಯಾಂಡ್ ಆಗಿ ತೆರೆಗೆ ಬರಲಿದೆ.

