ಡಾಲಿ ಧನಂಜಯ – ರಚಿತಾ ರಾಮ್ ಮೊದಲ ಬಾರಿ ಜೋಡಿಯಾಗಿ ಕಾಣಿಸಿಕೊಂಡಿರುವ ‘ಮಾನ್ಸೂನ್ ರಾಗ’ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ.
ಮೊದಲೇ ತಿಳಿದಂತೆ ಇದೊಂದು ವಿಭಿನ್ನ ಪ್ರೇಮಕಥೆ. ಇಲ್ಲಿ ಬರುವುದು ಒಂದಲ್ಲ ನಾಲ್ಕು ಕಥೆಗಳು. ಆ ನಾಲ್ಕು ಕಥೆಗಳಲ್ಲಿ ಬದುಕಿನ ನಾಲ್ಕು ಹಂತದಲ್ಲಿ ನಡೆಯುತ್ತವೆ. ಬಾಲ್ಯ, ಯೌವನ,ಪ್ರೌಢಾವಸ್ಥೆ ಹಾಗೂ ಮುಪ್ಪಿನಲ್ಲಿ ನಡೆಯುವ ಪ್ರೇಮ ಕಥೆಗೆ ಕ್ಲೈಮ್ಯಾಕ್ಸ್ ನಲ್ಲೊಂದು ತಿರುವಿದೆ.
ಬಾರ್ ಹುಡುಗನಿಗೆ ವೇಶ್ಯಯೊಬ್ಬಳ ಮೇಲಾಗುವ ಪ್ರೀತಿ ಇಲ್ಲಿ ಹೈಲೈಟ್. ಹಾಗೆ ಮುಪ್ಪಿನ ಪ್ರೇಮ ಕಥೆಯೂ ಇಲ್ಲಿ ಸುಂದರವಾಗಿ ತೋರಿಸಲಾಗಿದೆ.


ಡಾಲಿ ಧನಂಜಯ ಮಿಡಲ್ ಕ್ಲಾಸ್ ಹುಡುಗನಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ನಿತ್ಯದ ದುಡಿವು, ಹಸಿವಿನಲ್ಲಿ ವೇಶ್ಯಯೊಬ್ವಳ ಪ್ರೀತಿಯನ್ನು ಆತನ ಬೆಳಕಾಗಿ ತೋರಿಸಲಾಗಿದೆ. ಇಲ್ಲಿ ನಾಲ್ಕು ಕಥೆಗಳಿಗೆ ಅವುಗಳಾದ್ದೇ ಆದ ಪರಿಸ್ಥಿತಿಯ ಹಿನ್ನೆಲೆಯಿದೆ.


ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಂಡ ಡಾಲಿ – ರಚ್ಚು ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಚಿತ್ರದ ಮತ್ತೊಂದು ಪಾಸಿಟಿವ್ ಅಂಶವೆಂದರೆ ಆಯಾಯ ಸನ್ನಿವೇಶಕ್ಕನುಗುಣವಾಗಿ ಬರುವ ಡೈಲಾಗ್ಸ್ ಗಳು. ಸುಹಾಸಿನಿ ಹಾಗೂ ಅಚ್ಯುತ್ ಕುಮಾರ್ ಅವರ ಅಭಿನಯ ಇಷ್ಟವಾಗುತ್ತದೆ. ಇದರೊಂದಿಗೆ ಅನೂಪ್ ಸೀಳಿನ್ ಮ್ಯೂಸಿಕ್ ಚಿತ್ರದ ಉದ್ದಕ್ಕೂ ಅಮಲಿನಂತೆ ಸೆಳೆಯುತ್ತದೆ.
ತೆಲುಗಿನ ‘ಕೇರ್ ಆಫ್ ಕಂಚರಪಾಲೆಂ ‘ ರಿಮೇಕ್ ಆಗಿರುವ ‘ಮಾನ್ಸೂನ್ ರಾಗ’ ಕನ್ನಡದ ಸೊಗಡಿನಲ್ಲಿ ಮೂಡಿ ಬಂದಿದೆ. ಸ್ಕ್ರೀನ್ ಪ್ಲೇ ಹಾಗೂ ಛಾಯಾಗ್ರಹಣ ಚಿತ್ರವನ್ನು ಫೀಲ್ ಗುಡ್ ಮೂವಿಯನ್ನಾಗಿಸುತ್ತದೆ.

