ಡಾಲಿ ಧನಂಜಯ್ ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಎರಡು ಚಿತ್ರಗಳು ಬೇಗ ರಿಲೀಸ್ ಆಗಲಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.


ಎಸ್. ರವೀಂದ್ರನಾಥ್ ಅವರ ‘ಮಾನ್ಸೂನ್ ರಾಗ‘ ಚಿತ್ರ ಸೆಟ್ಟೇರಿದ ದಿನದಿಂದಲೂ ಸದ್ದು ಮಾಡುತ್ತಿದ್ದು, ನಿರ್ಮಾಣ ಜೊತೆ ಪ್ರಚಾರಕ್ಕೂ ಎ. ಆರ್ ವಿಖ್ಯಾತ ಕ್ರಿಯೇಟಿವ್ ಪ್ಲಾನ್ಸ್ ಮಾಡಿದ್ದಾರೆ. ಇದೀಗ ಚಿತ್ರ ರಿಲೀಸ್ ಗೆ ಬಂದು ನಿಂತಿದೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 19 ರಂದು ಚಿತ್ರ ತೆರೆಗೆ ಬರಲಿದೆ.


ಚಿತ್ರದ ಹಾಡುಗಳು ಈಗಾಗಲೇ ಹಿಟ್ ಲಿಸ್ಟ್ ಗೆ ಸೇರಿದ್ದು, ಚಿತ್ರದ ತುಣುಕು ಸಖತ್ ಸುದ್ದಿ ಮಾಡಿದೆ.
ನಟ ರಾಕ್ಷಸ ಡಾಲಿ ಧನಂಜಯ ಅವರಿಗೆ ಅಭಿಮಾನಿಗಳು ಕಡಿಮೆ ಇಲ್ಲ. ಅವರ ನಟನೆಗೆ ಫಿದಾ ಆಗಿರುವ ಅಭಿಮಾನಿಗಳು ‘ಮಾನ್ಸೂನ್ ರಾಗ’ ಚಿತ್ರವನ್ನು ಜೋರಾಗಿ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.
ಅಭಿಮಾನಿಗಳು ತನ್ನ ಮೆಚ್ಚಿನ ನಟನ ಚಿತ್ರಕ್ಕಾಗಿ 100 ಕಟೌಟ್ ಗಳನ್ನು ತಯಾರಿಸಲಿದ್ದಾರೆ. ಈಗಾಗಲೇ ಈ ಕಾರ್ಯ ಆರಂಭವಾಗಿದೆ.
ರಾಜ್ಯದೆಲ್ಲೆಡೆ ‘ಮಾನ್ಸೂನ್ ರಾಗ’ ಹವಾ ಬೀಸಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.



