

ಎಸ್. ರವೀಂದ್ರನಾಥ್ ‘ಮಾನ್ಸೂನ್ ರಾಗ’ ಚಿತ್ರ ಈ ವಾರ ತೆರೆಗೆ ಬರಲಿದೆ.
ಡಾಲಿ ಧನಂಜಯ – ರಚಿತಾ ರಾಮ್ ಮುಖ್ಯಭೂಮಿಕೆಯ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್ ಬಳಿಕ ಅತೀ ಹೆಚ್ಚು ಸದ್ದು ಮಾಡಿದ್ದು ಅಂದರೆ ಅದು ಸಿನಿಮಾದ ಹಾಡುಗಳು. ‘ರಾಗ ಸುಧಾ’ ಸೌತ್ ಬಿಟ್ ವುಳ್ಳ ಹಾಡು ಕೇಳುಗರಿಗೆ ಹೊಸ ಫೀಲ್ ನೀಡುತ್ತದೆ. ಈಗಾಗಲೇ ಈ ಹಾಡು ಟ್ರೇಲರ್ ನಷ್ಟೇ ಹಿಟ್ ಆಗಿದೆ. ಇತ್ತೀಚೆಗೆ ರಿಲೀಸ್ ಆಗಿರುವ ‘ಮೇಘರಾಜನ ರಾಗ’ ಹಾಡು ಕೂಡ ಜನಮನ್ನಣೆಯನ್ನು ಪಡೆಯುತ್ತಿದೆ.


ರಚಿತಾ ರಾಮ್ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಲಾಸ್ ಎರಡೂ ಶೇಡ್ ನಲ್ಲಿ ಧನಂಜಯ ಮಿಂಚಲಿದ್ದಾರೆ. ಇದೊಂದು ಭಿನ್ನವಾದ ಲವ್ ಸ್ಟೋರಿವುಳ್ಳ ಚಿತ್ರವಾಗಿದೆ.
ಚಿತ್ರಕ್ಕೆ ಅನೂಪ್ ಸೀಳಿನ್ ಮ್ಯೂಸಿಕ್ ನೀಡಿದ್ದು, ವಿಖ್ಯಾತ್ ಎ.ಆರ್. ಅವರು ನಿರ್ಮಾಣ ಮಾಡಿದ್ದಾರೆ.
ಡಾಲಿ ಧನಂಜಯ, ರಚಿತಾ ರಾಮ್, ಸುಹಾಸಿನಿ ಮಣಿರತ್ನಂ,ಯಶ ಶಿವಕುಮಾರ್, ಅಚ್ಯುತ್ ಕುಮಾರ್ ಮುಂತಾದ ಪ್ರಮುಖರು ಚಿತ್ರದಲ್ಲಿ ನಟಿಸಿದ್ದಾರೆ.



