ಡಾಲಿ ಧನಂಜಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಮಾನ್ಸೂನ್ ರಾಗ’ ಚಿತ್ರದ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
ವಿಭಿನ್ನ ಪ್ರೇಮ ಕಥೆಯನ್ನು ಒಳಗೊಂಡಿರುವ ‘ಮಾನ್ಸೂನ್ ರಾಗ’ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್ 19 ರಿಲೀಸ್ ಆಗಬೇಕಿತ್ತು. ಚಿತ್ರ ತಂಡ ಬಿಡುಗಡೆ ದಿನಾಂಕ ಮುಂದೂಡಿ ಈಗ ಹೊಸ ರಿಲೀಸ್ ಡೇಟ್ ರಿವೀಲ್ ಮಾಡಿದೆ.
ಹಾಡುಗಳಿಂದ ಮೋಡಿ ಮಾಡುತ್ತಾ ‘ಮಾನ್ಸೂನ್ ರಾಗ’:
ಸಿನಿಮಾದ ಪೋಸ್ಟರ್, ಟೀಸರ್, ಟ್ರೇಲರ್ ಬಳಿಕ ಅತೀ ಹೆಚ್ಚು ಸದ್ದು ಮಾಡಿದ್ದು ಅಂದರೆ ಅದು ಸಿನಿಮಾದ ಹಾಡುಗಳು. ‘ರಾಗ ಸುಧಾ’ ಸೌತ್ ಬಿಟ್ ವುಳ್ಳ ಹಾಡು ಕೇಳುಗರಿಗೆ ಹೊಸ ಫೀಲ್ ನೀಡುತ್ತದೆ. ಈಗಾಗಲೇ ಈ ಹಾಡು ಟ್ರೇಲರ್ ನಷ್ಟೇ ಹಿಟ್ ಆಗಿದೆ. ಹೊಸದಾಗಿ ರಿಲೀಸ್ ಆಗಿರುವ ‘ಮೇಘರಾಜನ ರಾಗ’ ಹಾಡು ಕೂಡ ಜನಮನ್ನಣೆಯನ್ನು ಪಡೆಯುತ್ತಿದೆ.
ಅನೂಪ್ ಸೀಳಿನ್ ಮ್ಯೂಸಿಕ್
ಮಳೆಯೊಂದಿಗೆ ಕೇಳುಗರನ್ನು ಮೋಡಿ ಮಾಡುತ್ತಿವೆ.


ರಚಿತಾ ರಾಮ್ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಲಾಸ್ ಎರಡೂ ಶೇಡ್ ನಲ್ಲಿ ಧನಂಜಯ ಮಿಂಚಲಿದ್ದಾರೆ. ಇದೊಂದು ಭಿನ್ನವಾದ ಲವ್ ಸ್ಟೋರಿವುಳ್ಳ ಚಿತ್ರವಾಗಿದೆ.
ಡಾಲಿ ಧನಂಜಯ ಸೇರಿದಂತೆ ಚಿತ್ರದ ಪ್ರಮುಖರು ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಎಸ್ ರವೀಂದ್ರನಾಥ್ ಅವರ ಚಿತ್ರ ಸೆ.16 ರಂದು ರಿಲೀಸ್ ಆಗಲಿದೆ.
ಡಾಲಿ ಧನಂಜಯ, ರಚಿತಾ ರಾಮ್, ಸುಹಾಸಿನಿ ಮಣಿರತ್ನಂ,ಯಶ ಶಿವಕುಮಾರ್, ಅಚ್ಯುತ್ ಕುಮಾರ್ ಮುಂತಾದ ಪ್ರಮುಖರು ಚಿತ್ರದಲ್ಲಿ ನಟಿಸಿದ್ದಾರೆ.



