ನಟಿ ಮೇಘನಾ ರಾಜ್ ಬದುಕಿನಲ್ಲಾದ ಅನಿರೀಕ್ಷಿತ ಆಘಾತದಿಂದ ಹೊರ ಬರಲು ಪ್ರಯತ್ನ ಮಾಡುತ್ತಿದ್ದಾರೆ. ತನ್ನ ಮಗ ರಾಯನ್ ಅವರೊಂದಿಗೆ ಖುಷಿ ಖುಷಿಯಾಗಿ ಇದ್ದಾರೆ.
ಮೇಘನಾ ಅವರ ಎರಡನೇ ಮದುವೆ ಬಗ್ಗೆ ಇತ್ತೀಚೆಗೆ ಚರ್ಚೆ ನಡೆಯುತ್ತಿವೆ. ಕೆಲ ವದಂತಿಗಳು ಸತ್ಯವಾಗಿ ಎಲ್ಲೆಡೆ ಹಬ್ಬಿದೆ. ಈ ವಿಚಾರಕ್ಕೆ ನಟಿಯೇ ಸ್ವತಃ ಸ್ಪಷ್ಟನೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮೇಘನಾ ಅವರು, ಪ್ರಶ್ನೆವೊಂದಕ್ಕೆ ಉತ್ತರಿಸುತ್ತಾ, ತನ್ನ ಸುತ್ತ ಇರುವ ಅದೆಷ್ಟೋ ಜನರು ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ. ಮತ್ತೆ ಕೆಲವರು ಒಂಟಿಯಾಗಿದ್ದುಕೊಂಡು ಮಗ ರಾಯನ್ ಅನ್ನು ನೋಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಎರಡನ್ನೂ ಹೇಳುವ ಜನರೂ ಇದ್ದಾರೆ.’ ಎಂದು ಪ್ರತಿಕ್ರಿಯೆ ನೀಡಿದ್ದರು.
ಈ ಮಾತು ಅವರು ಎರಡನೇ ಮದುವೆಯಾಗುತ್ತಾರೆ ಎನ್ನುವ ವದಂತಿಯನ್ನು ಹಬ್ಬಿಸಿತ್ತು. ಆದರೆ ನಟಿ ಇದಕ್ಕೆ ಪ್ರತಿಕ್ರಿಯೆ ನೀಡಿ, ನಾಳೆ ಹೇಗಿರುತ್ತೆ ಎಂದು ನಾನು ಯೋಚಿಸುವುದಿಲ್ಲ. ಮುಂದಿನ ಜೀವನ ಹೇಗಿರುತ್ತೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಈ ವಿಚಾರದ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಹೇಳಿ ಸ್ಪಷ್ಟನೆ ನೀಡಿದ್ದರು.
ಸೋಶಿಯಲ್ ಮೀಡಿಯಾದ ಆ್ಯಕ್ಟಿವ್ ಆಗಿರುವ ಮೇಘನಾ ರಾಜ್ ಸದ್ಯ ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಅಲ್ಲಿಂದಲ್ಲೇ ಅವರು ಫೋಟೋವೊಂದನ್ನು ಪೋಸ್ಟ್ ಮಾಡಿರುವುದು ವೈರಲ್ ಆಗಿದೆ.
ಮೇಘನಾ ಅವರು ರಾಯನ್ ಹಾಗೂ ಚಿರಂಜೀವಿ ಸರ್ಜಾ ಅವರು ಹೆಸರನ್ನು ಟ್ಯಾಟೋ ಮೂಲಕ ಅಚ್ಚೆ ಹಾಕಿಕೊಂಡಿದ್ದಾರೆ.
ಆ ಮೂಲಕ ಎರಡನೇ ಮದುವೆ ಬಗ್ಗೆ ಇರುವ ಪ್ರಶ್ನೆಗೆ ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ.

