HomeNewsಮೇಘನಾ ರಾಜ್ ಚಿತ್ರದಲ್ಲಿ ಖಡಕ್ ಪೊಲೀಸ್ ಆಗಿ ಡೈನಾಮಿಕ್ ಪ್ರಿನ್ಸ್

ಮೇಘನಾ ರಾಜ್ ಚಿತ್ರದಲ್ಲಿ ಖಡಕ್ ಪೊಲೀಸ್ ಆಗಿ ಡೈನಾಮಿಕ್ ಪ್ರಿನ್ಸ್

ನಟಿ ಮೇಘನಾ ರಾಜ್ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರ ಪ್ರೇಕ್ಷಕರನ್ನು ಸೆಳೆದಿತ್ತು.


ಆ ಬಳಿಕ ನಟಿ ಮೇಘನಾ ರಾಜ್ ಪನ್ನಗಭರಣ ಅವರ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸಿದ್ದು, ಈಗಾಗಲೇ ಚಿತ್ರೀಕರಣವನ್ನು ಮುಗಿಸಿರುವ ಚಿತ್ರ ತಂಡ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ವೊಂದನ್ನು ಕೊಟ್ಟಿದೆ.


ಈ ಚಿತ್ರದ ಮುನ್ನ ಮೇಘನಾ ‘ಬುದ್ಧಿವಂತ-2’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಣ್ಣ ಬ್ರೇಕ್ ತೆಗೆದುಕೊಂಡು ಈಗ ಮತ್ತೊಂದು ಚಿತ್ರದ ಶೂಟ್‌ ಮುಗಿಸಿದ್ದಾರೆ.


ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಹಿಂದೆ ‘ಇನ್ಸ್ ಪೆಕ್ಟರ್ ವಿಕ್ರಂ’ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈಗ ಬರುತ್ತಿರುವ ‘ಮಾಫಿಯಾ’ದಲ್ಲೂ ಅವರು ಖಡಕ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಅವರು ಮೇಘನಾ ಅಭಿನಯದ ಇನ್ನೂ ಹೆಸರಿಡದ ಚಿತ್ರದಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಅದು‌ ಕೂಡ ಪೊಲೀಸ್ ಅಧಿಕಾರಿಯಾಗಿ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.


ಕ್ರೈಮ್ – ಥ್ರಿಲ್ಲರ್ ಚಿತ್ರಕ್ಕೆ ವಿಶಾಲ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಫ್ರೆಂಚ್ ಬಿರಿಯಾನಿ’, ‘ಹ್ಯಾಪಿ ನ್ಯೂ ಇಯರ್’ ಚಿತ್ರವನ್ನು ನಿರ್ದೇಶನ ಮಾಡಿದ್ದ ಪನ್ನಗಭರಣ ಈ ಸಿನಿಮಾದ ಮೂಲಕ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.


ವಾಸುಕಿ ವೈಭವ್ ಅವರು ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‌ಚಿತ್ರದ ಇತರ ಪಾತ್ರ ವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.

RELATED ARTICLES

Most Popular

Share via
Copy link
Powered by Social Snap