ನಟಿ ಮೇಘಾನಾ ರಾಜ್ ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. ಚಿತ್ರರಂಗ ಬರುವ ಆರಂಭದಲ್ಲಿ ಮೇಘನಾ ಅವರು ಎದುರಿಸಿದ ಕಷ್ಟಗಳು, ಸವಾಲುಗಳ ಮಾತಾನಾಡಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ಮಾತಾನಾಡಿರುವ ಅವರು, ಆರಂಭದಲ್ಲಿ ಆಕೆಯ ತ್ವಚೆ ಸರಿಯಿಲ್ಲ, ತೂಕ ಹೆಚ್ಚು, ಮುಖ ದಪ್ಪ, ಕೂದಲು ಸರಿಯಿಲ್ಲ ಮುಂತಾದ ವಿಷಯಗಳನ್ನು ಇಟ್ಟುಕೊಂಡು ನನ್ನನ್ನು ಟೀಕೆ ಮಾಡಲಾಗುತ್ತಿತ್ತು. ಪ್ರೇಕ್ಷಕ, ಮಾಧ್ಯಮಗಳಿಂದ ನನಗೆ ಬೆಂವಲ ಸಿಗುತ್ತಿದ್ದರೂ ಚಿತ್ರರಂಗದಲ್ಲೇ ಹೆಚ್ಚು ಟೀಕೆಗಳು ಎದುರಾಯಿತು ಎಂದಿದ್ದಾರೆ.
ನಾನು ಮೊದಲಿಗೆ ತಮಿಳು ಸಿನಿಮಾದಿಂದ ಜರ್ನಿ ಆರಂಭಿಸಿದೆ ಆ ವೇಳೆ ಕೆಲವರು ನನಗೆ ಕನ್ನಡದ ಮೇಲೆ ಪ್ರೀತಿಯಿಲ್ಲ ಎನ್ನುತ್ತಿದ್ದರು. ಫೋಟೋ ಶೂಟ್ ಮಾಡಿಸಿದ ಬಳಿಕ ತ್ವಚ್ಛೆ, ಕೂದಲು ಹಾಗೂ ಬಾಡಿ ಶೇಮಿಂಗ್ ಹೇಳಿ ಟೀಕೆ ಮಾಡುತ್ತಿದ್ದರು ಎಂದಿದ್ದಾರೆ.
ಕೆಲವು ಮೇಕಪ್ ಕಲಾವಿದರು ನಿಮ್ಮ ಬಗ್ಗೆ ನಿಮಗೇ ಅನುಮಾನ ಬರುವಂತೆ ಮಾಡಿಬಿಡುತ್ತಾರೆ. ನನಗಂತೂ ಅಂಥಹಾ ಅನುಭವ ಸಾಕಷ್ಟಾಗಿದೆ. ನನಗೆ ಕಾನ್ಫಿಡೆನ್ಸ್ ಇಲ್ಲದಾಗಿಬಿಟ್ಟಿತ್ತು, ಚಿತ್ರೀಕರಣಕ್ಕೆ ಹೋಗುವುದೆಂದರೆ ಭಯವಾಗುತ್ತಿತ್ತು. ಆ ನಂತರ ಹೇಗೋ ಮಾಡಿ ಅದೆಲ್ಲದರಿಂದ ಪಾರಾದೆ. ಕಷ್ಟಪಟ್ಟು ಮತ್ತೆ ಶೇಪ್‌ಗೆ ಬಂದೆ. ಈಗ ಪೋಸ್ಟ್ ಪ್ರೆಗೆನ್ಸಿಯಿಂದಾಗಿ ಮತ್ತೆ ದೇಹತೂಕ ಹೆಚ್ಚಾಗಿದೆ. ಆದರೆ ಜನ ಈಗ ತುಸು ದಯಾಳುವಾಗಿದ್ದಾರೆ. ಮೊದಲಿನಷ್ಟು ಟೀಕೆ ಈಗ ಕೇಳಿಬರುತ್ತಿಲ್ಲ. ಜನ ಸದಾ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ” ಎಂದಿದ್ದಾರೆ ಮೇಘನಾ ರಾಜ್.

