ಸೌರಾಷ್ಟ್ರ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬೃಹತ್ ಮೊತ್ತವನ್ನು ದಾಖಲಿಸಿ ಉತ್ತಮ ಸ್ಥಿರಿಯಲ್ಲಿದೆ.
ಕರ್ನಾಟಕ ತಂಡ ಬುಧವಾರ 229 ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ಒಂದು ಕಡೆಯಿಂದ ತಂಡಕ್ಕೆ ಕಪ್ತಾನ ಮಾಯಾಂಕ್ ಅಗರ್ವಾಲ್ ಭರವಸೆಯಿಂದ ಬ್ಯಾಟ್ ಬೀಸುತ್ತಿದ್ದರು. ಗುರುವಾರ 407 ರನ್ ಗಳಿಸಿ ಆಲೌಟಾಗಿದೆ.
ಟೀಮ್ ಇಂಡಿಯಾದಲ್ಲಿ ಆರಂಭಿಕರಾಗಿ ಟೆಸ್ಟ್ ತಂಡದಲ್ಲೂ ಕಾಣಿಸಿಕೊಂಡಿದ್ದ ಮಾಯಾಂಕ್ ಆ ಬಳಿಕ ಇತ್ತೀಚೆಗೆ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದೇ ತಂಡದಿಂದ ಡ್ರಾಪ್ ಔಟ್ ಆಗಿದ್ದರು. ಮತ್ತೆ ಹೇಗಾದರೂ ಮಾಡಿ ಸ್ಥಾನವನ್ನು ಪಡೆದುಕೊಂಡು ತಂಡದಲ್ಲಿ ಮಿಂಚಬೇಕೆನ್ನುವ ಹಟ ತೊಟ್ಟಿರುವ ಮಾಯಾಂಕ್ ರಣಜಿಯಲ್ಲಿ ಸಫಲರಾಗಿದ್ದಾರೆ.
ಒಟ್ಟು 429 ಎಸೆತಗಳನ್ನು ಎದುರಿಸಿ, 28 ಬೌಂಡರಿ, 6 ಸಿಕ್ಸರ್‌ಗಳನ್ನು ಬಾರಿಸಿ, ತಂಡ 400 ಗಡಿ ದಾಟಲು ಪ್ರಮುಖ ರೂವಾರಿಯಾದರು.
ಇದಕ್ಕೆ ಜವಾಬು ಕೊಟ್ಟು ಬ್ಯಾಟಿಂಗ್ ಆರಂಭಿಸಿರುವ ಸೌರಾಷ್ಟ್ರ 76 ಕ್ಕೆ ವಿಕೆಟ್ ವಿಕೆಟ್ ಕಳೆದುಕೊಂಡಿದೆ.

