ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಗೆ ಜಂಕಾರ್ ಮ್ಯೂಸಿಕ್ ಸಂಸ್ಥೆ ಅಪ್ಪು ಸವಿ ನೆನಪನ್ನು ಸಾರು ನಿಟ್ಟಿನಲ್ಲಿ “ಮತ್ತೊಮ್ಮೆ ಬಾ ಮಗುವಾಗಿ ಬಾ” ಹಾಡು ಬಿಡುಗಡೆ ಮಾಡಿದೆ.
ಚಂದನವನದಲ್ಲಿ ಹಲವಾರು ವರ್ಷಗಳಿಂದ ಜನಪದ, ಸಿನಿಮಾ ಶೈಲಿಯ ಹಾಡುಗಳನ್ನು ನೋಡುತ್ತಾ ಬಂದಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆ ಅಪ್ಪು ಅವರ ನೆನಪಿನಲ್ಲಿ ಅವರ ಪ್ರಥಮ ಪುಣ್ಯಸ್ಮರಣೆಗೆ ಮತ್ತೊಮ್ಮೆ ಬಾ ಮಗುವಾಗಿ ಬಾ” ಎಂಬ ಹಾಡನ್ನು ಬಿಡುಗಡೆ ಮಾಡಿದೆ.
ಪುನೀತ್ ಎಸ್ ಎಸ್ ಬರೆದಿರುವ ಈ ಹಾಡನ್ನು ʼಮೋಸಗಾತಿಯೇʼ ಖ್ಯಾತಿಯ ಅರ್ಫಜ್ ಉಲ್ಲಾಳ್ ಹಾಡಿ ಅವರೇ ಸಂಗೀತವನ್ನು ನೀಡದ್ದಾರೆ.
ನಗುವಿನ ರಾಜ ಕನ್ನಡದ ತೇಜ ಡಾ|| ಪುನೀತ್ ರಾಜ್‍ಕುಮಾರ್ ಅವರ ಸ್ಮರಣೆಗಾಗಿ ಎಂಬ ವಾಕ್ಯದೊಂದಿಗೆ ಈ ಹಾಡು ಬಿಡುಗಡೆಯಾಗಿದೆ.
ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್‍ಕುಮಾರ್ ಅವರ ಮೇಲಿರುವ ಅಪಾರ ಅಭಿಮಾನ ಈ ಹಾಡಿನಲ್ಲಿ ಎದ್ದು ಕಾಣುತ್ತಿದೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

