ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಚಿತ್ರ ಅಂದುಕೊಂಡ ದಿನಾಂಕಕ್ಕೆ ರಿಲೀಸ್ ಆಗಲ್ಲ ಎನ್ನುವ ಸುದ್ದಿ ಹೊರ ಬಂದಿದೆ.
ಕಂಪ್ಲೀಟ್ ಮಾಸ್ ಎಲಿಮೇಟ್ ವುಳ್ಳ ‘ಮಾರ್ಟಿನ್’ ಸೆಪ್ಟೆಂಬರ್ 30 ರಂದು ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಚಿತ್ರ ತಂಡ ಹೇಳಿತ್ತು. ಆದರೆ ಇದೀಗ ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆಯಾಗಿದೆ.
ಇದಕ್ಕೆ ಕಾರಣ ಧ್ರುವ ಸರ್ಜಾ ಅವರ ಅಜ್ಜಿ ಲಕ್ಷ್ಮೀ ದೇವಮ್ಮ ಅವರ ನಿಧನ. ಕೆಲ ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನೋಡಲು ಧ್ರುವ ಸರ್ಜಾ ಭೇಟಿ ನೀಡಿ, ಕುಟುಂಬದೊಂದಿಗೆ ಈ ಸಮಯದಲ್ಲಿ ಇದ್ದರು. ಆ ಬಳಿಕ ಅವರ ಅಜ್ಜಿ ತೀರಿ ಹೋದರು. ಈ ಕಾರಣಕ್ಕಾಗಿ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲು ಆಗಿಲ್ಲ.


ಚಿತ್ರ ತಂಡ ಹಾಕಿಕೊಂಡ 10-12 ದಿನಗಳ ಶೂಟಿಂಗ್ ಯೋಜನೆ ಹಿಂದೆ ಬಿದ್ದಿದೆ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ – ಕಾರ್ಯಗಳು ಬಾಕಿಯಿದೆ. ಇದರಿಂದ ಚಿತ್ರ ಅಂದುಕೊಂಡ ರಿಲೀಸ್ ಆಗಲ್ಲ ಎನ್ನಲಾಗಿದೆ.
ಈ ಸುದ್ದಿ ಧ್ರುವರನ್ನು ಮತ್ತೆ ಆ್ಯಕ್ಷನ್ ಲುಕ್ ನಲ್ಲಿ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಘೋಷಣೆ ಆಗುವ ಸಾಧ್ಯತೆಯಿದೆ.
‘ಅದ್ಧೂರಿ’ ಬಳಿಕ ಎಪಿ ಅರ್ಜುನ್ ಧ್ರುವ ಜೊತೆ ಮತ್ತೆ ಜೊತೆಯಾಗುತ್ತಿದ್ದಾರೆ. ಚಿತ್ರದಲ್ಲಿ ಈಗಾಗಲೇ ಗಾಳಿಪಟ -2 ಚಿತ್ರದಲ್ಲಿ ನಟಿಸಿರುವ ವೈಭವಿ ಶಾಂಡಿಲ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

