HomeNewsಬರುತ್ತಿದೆ ಧ್ರುವ ಸರ್ಜಾ ಅವರ ಬಹುನಿರೀಕ್ಷಿತ 'ಮಾರ್ಟಿನ್' ಸಿನಿಮಾದ ಟೀಸರ್.

ಬರುತ್ತಿದೆ ಧ್ರುವ ಸರ್ಜಾ ಅವರ ಬಹುನಿರೀಕ್ಷಿತ ‘ಮಾರ್ಟಿನ್’ ಸಿನಿಮಾದ ಟೀಸರ್.

ಸ್ಯಾಂಡಲ್ವುಡ್ ನಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಮಿಂಚುತ್ತಿರುವ ಸ್ಟಾರ್ ನಟರ ಪಟ್ಟಿಯಲ್ಲಿ ಇರುವವರು ಧ್ರುವ ಸರ್ಜಾ. ಮೊದಲನೇ ಸಿನಿಮಾದಿಂದ ಇಲ್ಲಿಯವರೆಗೂ ಎಲ್ಲವೂ ಹಿಟ್ ಸಿನಿಮಾಗಳನ್ನೇ ನೀಡಿದ್ದು, ಕ್ಷಿಪ್ರ ಕಾಲದಲ್ಲೇ ಅಪಾರ ಅಭಿಮಾನಿಗಳನ್ನ ಪಡೆದುಕೊಂಡಂತಹ ಹೆಗ್ಗಳಿಕೆ ಧ್ರುವ ಸರ್ಜಾ ಅವರದ್ದು. ಸದ್ಯ ಧ್ರುವ ಸರ್ಜಾ ಅವರು ಸುದ್ದಿಯಲ್ಲಿರುವಂತದ್ದು ಅವರ ಮುಂದಿನ ಸಿನಿಮಾ ‘ಮಾರ್ಟಿನ್’ ಚಿತ್ರದಿಂದ. ಬಹುನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾ ‘ಮಾರ್ಟಿನ್’ ತನ್ನ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿ ನಿಂತಿದ್ದು, ಅಭಿಮಾನಿಗಳು ಚಿತ್ರದ ಬಿಡುಗಡೆಗೆ ಹಾತೊರೆದು ಕಾಯುತ್ತಿದ್ದಾರೆ. ಸದ್ಯ ಚಿತ್ರದಿಂದ ಟೀಸರ್ ಹೊಸ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಟ್ರೆಂಡ್ ಆಗುತ್ತಿದೆ.

‘ಆಕ್ಷನ್ ಪ್ರಿನ್ಸ್’ ಎಂದೇ ಹೆಸರಾಗಿರುವ ಧ್ರುವ ಸರ್ಜಾ ಅವರು, ತಮ್ಮ ಮೊದಲ ಸಿನಿಮಾ ‘ಅದ್ದೂರಿ’ಯ ನಂತರ ಎರಡನೇ ಬಾರಿಗೆ ನಿರ್ದೇಶಕ ಎ ಪಿ ಅರ್ಜುನ್ ಅವರ ಜೊತೆಗೆ ಮಾಡುತ್ತಿರುವ ಸಿನಿಮಾ ‘ಮಾರ್ಟಿನ್’. ‘ಭಾರತದ ಅತೀ ದೊಡ್ಡ ಆಕ್ಷನ್ ಸಾಗ’ ಎಂದೇ ಸಿನಿಮಾ ಕರೆಯಲ್ಪಡುತ್ತಿದೆ. ಚಿತ್ರದ ಟೀಸರ್ ಅನ್ನು ಇದೇ ಫೆಬ್ರವರಿ 23ರಂದು ಬಿಡುಗಡೆಗೊಳಿಸಲು ನಿರ್ಧರಿಸಿರುವ ಚಿತ್ರತಂಡ, ಆ ದಿಕ್ಕಿನಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದರ ಭಾಗವೇ ಎಂಬಂತೆ ಇಂದು ಚಿತ್ರತಂಡದಿಂದ ಹೊಸ ಪೋಸ್ಟರ್ ಒಂದು ಬಿಡುಗಡೆಯಾಗಿದೆ. ಸಕ್ಕತ್ ರಗಡ್ ಮಾಸ್ ಲುಕ್ ನಲ್ಲಿ ಧ್ರುವ ಸರ್ಜಾ ಅವರು ಕಾಣಿಸಿಕೊಂಡಿದ್ದು, ಇದೊಂದು ಪಕ್ಕ ಆಕ್ಷನ್ ಎಂಟರ್ಟೈನರ್ ಎಂಬ ಹೆಸರಿಗೆ ನ್ಯಾಯ ಒದಗಿಸಿಕೊಡುವಂತಿದೆ ಪೋಸ್ಟರ್.

ಎ ಪಿ ಅರ್ಜುನ್ ಅವರ ನಿರ್ದೇಶನದಲ್ಲಿ ಧ್ರುವ ಸರ್ಜಾ ಹಾಗು ‘ಗಾಳಿಪಟ 2’ ಖ್ಯಾತಿಯ ವೈಭವಿ ಶಾಂಡಿಲ್ಯ ಅವರು ಜೊತೆಯಾಗಿ ನಟಿಸುತ್ತಿರುವ ‘ಮಾರ್ಟಿನ್’ ಸಿನಿಮಾವನ್ನು ಉದಯ್ ಕೆ ಮೆಹತಾ ಅವರು ನಿರ್ಮಾಣ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಮಣಿ ಶರ್ಮ ಅವರ ಸಂಗೀತ ಜೊತೆಗೆ ರವಿ ಬಸ್ರುರ್ ಅವರ ಹಿನ್ನೆಲೆ ಸಂಗೀತ ಚಿತ್ರದಲ್ಲಿರಲಿದೆ. ಹೆಸರಾಂತ ಛಾಯಾಗ್ರಹಕ ಸತ್ಯ ಹೆಗ್ಡೆ ಅವರು ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದಾರೆ. ಉದಯ್ ಕೆ ಮೆಹತಾ ಅವರ ನಿರ್ಮಾಣದಲ್ಲಿ ಅದ್ದೂರಿಯಾಗಿಯೇ ಸಿದ್ದವಾಗಿರುವ ಈ ಸಿನಿಮಾ ಅಪಾರ ನಿರೀಕ್ಷೆಗಳನ್ನು ಹೊಂದಿದೆ. ಇದೇ ಫೆಬ್ರವರಿ 23ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಶೀಘ್ರದಲ್ಲಿಯೇ ಸಿನಿಮಾ ಕೂಡ ತೆರೆಕಾಣಲಿದೆ.

RELATED ARTICLES

Most Popular

Share via
Copy link
Powered by Social Snap