ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಂಟೆಂಟ್ ವುಳ್ಳ ಸಿನಿಮಾಗಳು ತೆರೆಗೆ ಬರುತ್ತಿರುತ್ತದೆ. ಮಹಿಳಾ ಪ್ರಧಾನ ಕಥೆಯನ್ನಿಟ್ಟುಕೊಂಡು
“ಮರ್ದಿನಿ” ಎನ್ನುವ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ.
ಕಿರಣ್ ಕುಮಾರ್ ವಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರದ ಟ್ರೇಲರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು.
ಸಮಾರಂಭದಲ್ಲಿ ಮಾತಾನಾಡಿ ನಿರ್ದೇಶಕ ಕಿರಣ್ ಕುಮಾರ್
“ಮರ್ದಿನಿ” ಇದೊಂದು ಮಹಿಳಾ ಪ್ರಧಾನ ಚಿತ್ರ. ರಿತನ್ಯ ಹೂವಣ್ಣ “ಮರ್ದಿನಿ” ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಡುಗೆಮನೆಯಿಂದ ಆರ್ಮಿ ತನಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯಾರಿಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಕೊರೋನ ಸಮಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣಪಣಕ್ಕಿಟ್ಟು ಸೇವೆ ಸಲ್ಲಿಸಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಎಲ್ಲಾ ಅಂಶಗಳನಿಟ್ಟುಕೊಂಡು, ಇದರ ಜೊತೆಗೆ ಉತ್ತಮ ಮನೋರಂಜನೆ ಸಹಯಿರುವ ಸಿನಿಮಾ ಮಾಡಿದ್ದೀನಿ. ಚಿತ್ರ ಸೆಪ್ಟೆಂಬರ್ 16 ರಂದು ಬಿಡುಗಡೆಯಾಗುತ್ತಿದೆ. ಸಹಕಾರ ನೀಡಿದ್ದ ನಿರ್ಮಾಪಕರಿಗೆ ಹಾಗೂ ತಮ್ಮ ತಂಡಕ್ಕೆ ನಿರ್ದೇಶಕ ಕಿರಣ್ ಕುಮಾರ್ ಧನ್ಯವಾದ ತಿಳಿಸಿದರು.


ಚಿತ್ರದ ನಿರ್ಮಾಪಕರಾಗಿರುವ ಜಗ್ಗಿ ಮಾತಾನಾಡಿ, ನಾನು ಸುದೀಪ್ ಅವರ ಅಭಿಮಾನಿ. ಕಳೆದ ಹದಿನೆಂಟು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿದೆ. ಸಾವಿರಾರು ಚಿತ್ರಗಳಿಗೆ ಸ್ಟ್ಯಾಂಡಿಸ್ ಹಾಗೂ ಬ್ಯಾನರ್ ಗಳನ್ನು ಮಾಡಿದ್ದೀನಿ. ಸಿನಿಮಾ ನಿರ್ಮಾಣ ಮಾಡಿ, ಹೊಸ ಕಲಾವಿದರಿಗೆ ಅವಕಾಶ ನೀಡಬೇಕೆಂದು ನನ್ನ ಆಸೆಯಿತ್ತು. “ಮರ್ದಿನಿ” ಚಿತ್ರದ ಮೂಲಕ ಈಡೇರಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾಯಿರಲಿ ಎಂದರು.
ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ರಿತನ್ಯ ಹೂವಣ್ಣ,ಆಡಿಷನ್ ಮೂಲಕ ಆಯ್ಕೆಯಾದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೀನಿ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದೀನಿ ಎಂದರು.


ಇನ್ನು ಅಕ್ಷಯ್ ನಾಯಕ ನಟನೊಂದಿಗೆ ಕಥೆಯನ್ನೂ ಬರೆದಿದ್ದಾರೆ.
ಚಿತ್ರಕ್ಕೆ ಹಿತನ್ ಹಾಸನ್ ಅವರ ಸಂಗೀತವಿದೆ.

