HomeNewsಹಿಂದುಳಿದ ಬುಡಕಟ್ಟು ಸಮುದಾಯಕ್ಕೆ ಅವರದೇ ಕಥೆಯನ್ನ ತೆರೆಮೇಲೆ ತೋರಿಸಿದರು ನಿರ್ದೇಶಕ ಮಂಸೋರೆ!

ಹಿಂದುಳಿದ ಬುಡಕಟ್ಟು ಸಮುದಾಯಕ್ಕೆ ಅವರದೇ ಕಥೆಯನ್ನ ತೆರೆಮೇಲೆ ತೋರಿಸಿದರು ನಿರ್ದೇಶಕ ಮಂಸೋರೆ!

ಹರಿವು’,’ಆಕ್ಟ್ 1978′ ನಂತಹ ಮನ ತಟ್ಟುವ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವವರು ನಿರ್ದೇಶಕ ಮಂಸೋರೆ ಅವರು. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ನಿರ್ದೇಶಕ ಎಂಬ ಹೆಗ್ಗಳಿಕೆ ಇವರದ್ದು. ಇಂತಹ ಪ್ರಭುದ್ದ ನಿರ್ದೇಶಕರ ಮುಂದಿನ ಸಿನಿಮಾ, ಮತ್ತೊಂದು ನೈಜಕಥೆಯನ್ನ ಆಧಾರಿತ ಚಿತ್ರ ‘19.20.21’. ಬಹುವಿಶೇಷ ಎನಿಸುವ ಶೀರ್ಷಿಕೆಯಂತೆ ಸಿನಿಮ ಕೂಡ ವಿಶೇಷವಾಗಿಯೇ ಇರಲಿದೆ. ಇದೊಂದು ಹಿಂದುಳಿದ ಸಮುದಾಯದವರ ನೈಜಕಥೆ. ನಕ್ಸಲ್ ಪೀಡಿತ ಪ್ರದೇಶಗಳ, ಅಲ್ಲಿನ ಜನರ ನೈಜ ಚಿತ್ರಣವನ್ನ ಈ ಸಿನಿಮಾದಲ್ಲಿ ನೋಡಬಹುದು ಎಂದು ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೈಲರ್ ಸಾರಿ ಸಾರಿ ಹೇಳುತ್ತಿದೆ. ಮೈ ನವಿರೇಳಿಸುವಂತಿರೋ ಸಿನಿಮಾದ ಟ್ರೈಲರ್ ಗೆ ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ಕೇಳಿ ಬರುತ್ತಿದೆ. ಇದೆ ಮಾರ್ಚ್ 3ನೇ ತಾರೀಕಿನಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ನಡುವೆ ನಿರ್ದೇಶಕ ಮಂಸೋರೆ ಅವರು ತಮ್ಮ ಪ್ರಭುದ್ಧತೆಯನ್ನ ಮತ್ತೊಮ್ಮೆ ಮೆರೆದಿದ್ದಾರೆ.

ಈಗಾಗಲೇ ಹೇಳಿದಂತೆ ‘19.20.21’ ಒಂದು ನೈಜ ಘಟನೆ ಆಧಾರಿತ ಸಿನಿಮಾ. ಮಂಗಳೂರು ಸಮೀಪದ ಬುಡಕಟ್ಟು ಸಮುದಾಯವೊಂದು ಎದುರಿಸಿದ ಕಷ್ಟಗಳು, ಮಾನವನ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವಂತಹ ಕಥಾವಸ್ತು ಸಿನಿಮಾದಲ್ಲಿರಲಿದೆ. ಸದ್ಯ ನಿರ್ದೇಶಕ ಮಂಸೋರೆ ಅವರು ಯಾವ ಸಮುದಾಯದ ಕಥೆಯಿಂದ ಸಿನಿಮಾ ಮಾಡಿದ್ದಾರೋ ಅದೇ ಸಮುದಾಯಕ್ಕೆ ತಮ್ಮ ಸಿನಿಮಾವನ್ನ ತೋರಿಸಿದ್ದಾರೆ. ಮಂಗಳೂರಿನಲ್ಲಿ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನ ಪ್ರತ್ಯೇಕವಾಗಿ ಆ ಸಮುದಾಯಕ್ಕಾಗಿಯೇ ಪ್ರದರ್ಶನ ಮಾಡಲಾಗಿತ್ತು. ಸುಮಾರು 35ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ, ಈ ಸಮುದಾಯದ ಯಾವ ಒಬ್ಬರೂ ಕೂಡ ಚಿತ್ರಮಂದಿರದ ಮೆಟ್ಟಿಲನ್ನ ಏರಿರಲಿಲ್ಲವಂತೆ. ಇಂದು ಅವರದೇ ಕಥೆಯನ್ನ ಬೆಳ್ಳಿಪರದೆ ಮೇಲೆ ನೋಡುತ್ತಾ ಸಂತಸದ ಭಾವುಕತೆಯನ್ನ ಅವರು ಅನುಭವಿಸಿದರು. “ಸಿನಿಮಾ ನೋಡಿದ ಮೇಲೆ, ಅವರ ತಣ್ಣಗಿನ ಕೈಯಲ್ಲಿ ನನ್ನ ಕೈ ಹಿಡಿದು, ಏನೂ ಮಾತನಾಡದೆ ಅವರು ನೀಡಿದ ಪ್ರತಿಕ್ರಿಯೆಯ ಬಗ್ಗೆ ಏನು ಹೇಳಲಿ. ಇದಕ್ಕಿಂತ ಸಾರ್ಥಕತೆ ಇನ್ನೇನಿದೆ” ಎಂದು ಮಂಸೋರೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಹರಿವು’ ಕೂಡ ಒಬ್ಬ ನೈಜವ್ಯಕ್ತಿಯ ಕಥೆಯಗಿದ್ದರು, ಅವರನ್ನ ನೇರವಾಗಿ ಭೇಟಿ ಮಾಡಲು ಮಂಸೋರೆ ಅವರಿಗೆ ಆಗಿರಲಿಲ್ಲವಂತೆ. ಆದರೆ ಈ ಚಿತ್ರದ ಮುನ್ನ ಅಲ್ಲಿನ ಜನರೊಡಗಿನ ಒಡನಾಟ ಹಾಗು, ಈಗ ಅವರ ಪ್ರತಿಕ್ರಿಯೆ ಕಾಣಲು ಸಿಕ್ಕಿರುವುದು ನನಗೆ ಸಾರ್ಥಕತೆ ಎಂದಿದ್ದಾರೆ ನಿರ್ದೇಶಕರಾದ ಮಂಸೋರೆ. ದೇವರಾಜ್ ಆರ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ‘19.20.21’ ಸಿನಿಮಾದ ಮುಖ್ಯಪಾತ್ರಗಳಲ್ಲಿ, ಶೃಂಗಾ ಬಿ ವಿ, ರಾಜೇಶ್ ನಟರಂಗ, ಬಾಲಾಜಿ ಮನೋಹರ್, ಅವಿನಾಶ್, ಮಹದೇವ್ ಹಡಪದ, ವಿಶ್ವ ಕರ್ಣ ಮುಂತಾದವರು ನಟಿಸಿದ್ದಾರೆ. ಇದೆ ಮಾರ್ಚ್ 3ರಂದು ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

RELATED ARTICLES

Most Popular

Share via
Copy link
Powered by Social Snap