HomeExclusive News'ಮಹಾನ್ ಕಲಾವಿದ'ನಾಗಲು ಹೊರಟ್ರು ದಿಲೀಪ್ ರಾಜ್

‘ಮಹಾನ್ ಕಲಾವಿದ’ನಾಗಲು ಹೊರಟ್ರು ದಿಲೀಪ್ ರಾಜ್

ಕಿರುತೆರೆಯಲ್ಲಿ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ‌ಎಜೆ ಆಗಿ ಮಿಂಚುತ್ತಿರುವ ದಿಲೀಪ್ ರಾಜ್ ‘ಮಹಾನ್ ಕಲಾವಿದ’ದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.


ಚಿತ್ರಕ್ಕೆ ಅಭಯ್ ಚಂದ್ರ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಎರಡನೇ ಚಿತ್ರ. ಇತ್ತೀಚೆಗೆ ಚಿತ್ರ ತಂಡ ಚಿತ್ರದ ಬಗ್ಗೆ ಹಲವಾರು ಮಾಹಿತಿಯನ್ನು ಹಂಚಿಕೊಂಡಿತು.


ಚಿತ್ರದ ಬಗ್ಗೆ ‌ಮಾತಾನಾಡಿದ ನಿರ್ದೇಶಕ ಅಭಯ್ ಚಂದ್ರ, ನಾನು ಪತ್ರಕರ್ತ ಸುರೇಶ್ಚಂದ್ರ ಅವರ ಪುತ್ರ. ಇದು ನನ್ನ ಎರಡನೇ ಚಿತ್ರ. ಈ ಕಥೆಯನ್ನು ಸಿದ್ದಪಡಿಸಿಕೊಂಡು “ಕಲಾವಿದ” ಅಂತ ಶೀರ್ಷಿಕೆಯಿಟ್ಟಿದೆ. ಈ ವಿಷಯವನ್ನು ರವಿಚಂದ್ರನ್ ಸರ್ ಗೆ ತಿಳಿಸಿದೆ.

ಧಾರಾಳವಾಗಿ ಈ ಶೀರ್ಷಿಕೆ ಇಡು. ಆದರೆ ಬರೀ “ಕಲಾವಿದ” ಅಂತ ಬೇಡ. ಏನಾದರೂ ಸೇರಿಸು ಅಂದರು. ನಾನು “ಮಹಾನ್ ಕಲಾವಿದ” ಅಂತ ಇಟ್ಟೆ. ಕಲಾವಿದನೊಬ್ಬನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಹೊಂದಿರುವ ಚಿತ್ರವಿದು. ನಾನು ಈ ಪಾತ್ರ ಬರೆಯಬೇಕಾದರೆ ದಿಲೀಪ್ ರಾಜ್ ಈ ಪಾತ್ರಕ್ಕೆ ಸೂಕ್ತ ಎಂದು ಕೊಂಡಿದ್ದೆ.‌

ಅವರೆ ಈ ಚಿತ್ರದ ನಾಯಕರಾದರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಸಿಕ್ಕ ಗೆಳೆಯ ಭರತ್ ಬಿ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ‌. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಹೇಳಿದರು.


ಈ ಹಿಂದೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟ ದಿಲೀಪ್ ರಾಜ್, ‘ಮಹಾನ್ ಕಲಾವಿದ’ ಬಗ್ಗೆ ಮಾತಾನಾಡುತ್ತಾ, ಬಹಳ ದಿನಗಳ ನಂತರ ಮತ್ತೆ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಕಲಾವಿದ ಮಾಡುವ ನಟನೆ‌ ಮೊದಲು ನಿರ್ದೇಶಕರಿಗೆ ಮೆಚ್ಚುಗೆಯಾಗಬೇಕು. ನನ್ನ ನಟನೆ ಬಗ್ಗೆ ಮೊದಲು ಅಭಯ್ ಹೇಳಬೇಕು. ನಾನು ಸಹ ಈ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ಹೇಳಿದರು.

ನಿರ್ಮಾಪಕ ಭರತ್ ಬಿ ಗೌಡ ಮಾತಾನಾಡಿ,
ನಾನು ಮೂಲತಃ ಹಾಸನದವನು. ಈಗ ಮಂಡ್ಯ ನಿವಾಸಿ. ಅಪ್ಪ-ಅಮ್ಮನ ಸಹಕಾರದಿಂದ ನಿರ್ಮಾಪಕನಾಗಿದ್ದೇನೆ.‌ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು.

RELATED ARTICLES

Most Popular

Share via
Copy link
Powered by Social Snap