ನಮ್ ಟಾಕೀಸ್ ರೇಟಿಂಗ್ 【 3.5/5 】
ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟಿಸಿದ ‘ಮೇಡ್ ಇನ್ ಬೆಂಗಳೂರು’ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ.
ಎಲ್ಲರಿಗೂ ಜೀವನದಲ್ಲಿ ಏನಾದರೂ ಮಾಡಬೇಕೆನ್ನುವ ಕನಸುಗಳಿರುತ್ತವೆ. ನಾಯಕ (ಮಧುಸೂದನ್ ಗೋವಿಂದ್) ಹಾಗೂ ಆತನ ಸ್ನೇಹಿತರು ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡು ಇರುತ್ತಾರೆ. ತಾವೇ ಏನಾದರೂ ಮಾಡಬೇಕೆನ್ನುವ ಇಚ್ಛೆಯೊಂದಿಗೆ ಸ್ಟಾರ್ಟಪ್ ಮಾಡಲು ಹೋಗುತ್ತಾರೆ. ಬ್ಯುಸಿನೆಸ್ ಮಾಡಲು ಬೇಕಾಗುವ ಹಣಕ್ಕಾಗಿ ಅಲ್ಲಿ ಇಲ್ಲಿ ಕೇಳಿ ನೋಡುತ್ತಾರೆ. ಕೊನೆಗೆ ರೆಡ್ಡಿ ಎನ್ನುವವರು (ಸಾಯಿ ಕುಮಾರ್) ಅವರ ಬಳಿ ಸಾಲ ಕೇಳುತ್ತಾರೆ. ಇನ್ವೆಸ್ಟ್ ಮಾಡಲು ರೆಡ್ಡಿ ಹಣ ಕೊಡುತ್ತಾರೆ.


ಸಿಕ್ಕ ಹಣದಿಂದ ನಾಯಕ ಹಾಗೂ ಆತನ ಸ್ನೇಹಿತರು ಸ್ಟಾರ್ಟಪ್ ಸ್ಟಾರ್ಟ್ ಮಾಡುತ್ತಾರ? ಅವರಿಗೆ ಎದುರಾಗುವ ಸವಾಲುಗಳೇನು ಎನ್ನುವುದನ್ನು ನಿರ್ದೇಶಕ ಪ್ರದೀಪ್ ಅವರು ಒಂದಷ್ಟು ಅಂಶಗಳೊಂದಿಗೆ ಸ್ಕ್ರೀನ್ ಮೇಲೆ ತಂದಿದ್ದಾರೆ. ಅದೇನು ಎನ್ನುವುದನ್ನು ಥಿಯೇಟರ್ ನಲ್ಲಿ ನೋಡಿ.
ಅನಂತ್ ನಾಗ್ ಇಲ್ಲಿ ಉತ್ತರ ಭಾರತದ ಉದ್ಯೋಗಿಯಾಗಿ ಕಾಣಿಸಿಕೊಂಡಿರುವ ಅವರ ಪಾತ್ರ ಪ್ರಧಾನವಾಗಿದ್ದು, ಉತ್ತರ ಭಾರತೀಯನಂತೆಯೇ ಅವರು ಭಾಷೆಯನ್ನು ಬಳಸಿದ್ದಾರೆ.
ಪ್ರಕಾಶ್ ಬೆಳವಾಡಿ, ಸಾಯಿ ಕುಮಾರ್ ವಯಸ್ಸಿಗೆ ತಕ್ಕ ಪಾತ್ರವನ್ನು ಮಾಡಿದ್ದು, ಗಮನ ಸೆಳೆಯುತ್ತಾರೆ. ಅವರಿಬ್ಬರ ಪಾತ್ರದಲ್ಲೂ ಹೆಚ್ಚು ತೂಕವಿದೆ.
ನಾಯಕಿ ಇಲ್ಲಿ ಹಾಗೇ ಬಂದು ಹೀಗೆ ಹೋದರೂ ನಾಯಕನ ಜೀವನದಲ್ಲಿ ಒಂದು ಪಾಠವನ್ನು ಹೇಳಿ ಹೋಗುತ್ತಾರೆ.
ಸ್ಟಾರ್ಟಪ್ ಶುರು ಮಾಡಲು ಹೊರಡುವ ಯೂತ್ಸ್ ಗಳಿಗೊಂದು ಸಂದೇಶವನ್ನು ಚಿತ್ರ ನೀಡಲಾಗಿದೆ. ಸಾಧಿಸಲು ಹೊರಟವರಿಗೆ ‘ಮೇಡ್ ಇನ್ ಬೆಂಗಳೂರು’ ಒಂದು ಪಾಠ ಹಾಗೂ ಸ್ಪೂರ್ತಿಯನ್ನು ನೀಡಬಹುದು.



