‘ರಾಬರ್ಟ್’ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದ ರಾಘವ್ – ತನು ಪಾತ್ರಗಳು ಮತ್ತೆ ಒಂದಾಗಿ ಕಾಣಿಸಿಕೊಳ್ಳಲಿದೆ.
ರಾಘವ್ – ತನು ಅಂದ್ರೆ, ವಿನೋದ್ ಪ್ರಭಾಕರ್ – ಸೋನಲ್ ಮೊಂಥೆರೋ. ರಾಬರ್ಟ್ ಸಿನಿಮಾದಲ್ಲಿ ಈ ಜೋಡಿ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಆ ಬಳಿಕ ಅವರಿಬ್ಬರನ್ನು ಜೋಡಿಯಾಗಿ ಬೇರೆ ಚಿತ್ರದಲ್ಲಿ ನೋಡಬೇಕೆನ್ನುವ ಆಸೆ ಹಲವರು ವ್ಯಕ್ತಪಡಿಸಿದ್ದರು. ಆದರೆ ಅದು ಆಗಿರಲಿಲ್ಲ.


ಇದೀಗ ವಿನೋದ್ ಪ್ರಭಾಕರ್ – ಸೋನಲ್ ‘ಮಾದೇವ’ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಹೌದು ಈ ಹಿಂದೆ ‘ಖಾಕಿ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನವೀನ್ ಬಿ. ರೆಡ್ಡಿ ಈಗ ಮಾಸ್ ಎಲಿಮೆಂಟ್ ವುಳ್ಳ ಮಾದೇವ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಸೋನಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.




80 ದಶಕದ ಕಥೆಯಲ್ಲಿ ನಾಯಕ – ನಾಯಕಿ ಇಬ್ಬರು ಡಿಫೆರೆಂಟ್ ಆಗಿ ಕಾಣಿಸಿಕೊಳ್ಳಲಿದ್ದರಂತೆ. ಉಳಿದಂತೆ ಚಿತ್ರದಲ್ಲಿ ಶ್ರುತಿ, ಅಚ್ಯುತ್ ಕುಮಾರ್,ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ.
ಶಿವಮೊಗ್ಗ, ಧಾರವಾಡ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರ ತಂಡ.

