ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಚೊಚ್ಚಲ ಚಿತ್ರ ʼಲಕ್ಕಿಮ್ಯಾನ್ʼ ನಿರೀಕ್ಷೆಯಂತೆಯೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರದ ಪ್ರಿಮಿಯರ್ ಶೋ ಭರ್ತಿಯಾಗಿದ್ದು, ಇಂದು ಚಿತ್ರ ರಾಜ್ಯಾದೆಲ್ಲೆಡೆ ತೆರೆಗೆ ಬರಲಿದೆ.


ತಮಿಳಿನ “ಓ ಮೈ ಕಡವುಳೆ” ಚಿತ್ರದ ರಿಮೇಕ್ ಚಿತ್ರವಾಗಿದ್ದರೂ , ನಿರ್ದೇಶಕರಿಲ್ಲಿ ತನ್ನ ಕಥೆ ಹೇಳುವ ರೀತಿ ಹಾಗೂ ಮೇಕಿಂಗ್ ನಿಂದ ಗಮನ ಸೆಳೆಯುತ್ತಾರೆ. ನಿರ್ದೇಶನದ ಮೂಲಕ ನಾಗೇಂದ್ರ ಪ್ರಸಾದ್ ಮನ ಗೆದ್ದಿದ್ದಾರೆ




ಡಾರ್ಲಿಂಗ್ ಕೃಷ್ಣ ಲವರ್ ಬಾಯ್ ಗಿಂತ ಇಲ್ಲಿ, ಮನೆಯ ಗಂಡನಾಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಸೆಳೆಯುತ್ತಾರೆ. ಗಂಡ – ಹೆಂಡತಿ ನಡುವಿನ ಸಂಬಂಧ, ಸಂಘರ್ಷ, ಪ್ರೀತಿಯ ಪಯಣವನ್ನು ನೋಡುವ ಪ್ರೇಕ್ಷಕರಿಗೆ ಫೀಲ್ ಗುಡ್ ಸಿನಿಮಾದ ಭಾವ ಬರುತ್ತದೆ.


ಡಾರ್ಲಿಂಗ್ ಕೃಷ್ಣರೊಂದಿಗೆ ರೋಶನಿ ಪ್ರಕಾಶ್ ಹಾಗೂ ಸಂಗೀತ ಶೃಂಗೇರಿ ತನ್ನ ಅಭಿನಯದಿಂದ ಗಮನ ಸೆಳೆಯುತ್ತಾರೆ.
ಡಾರ್ಲಿಂಗ್ ಕೃಷ್ಣ ನಾಯಕನಾಗಿ ಎಷ್ಟು ಮುಖ್ಯವೂ ಚಿತ್ರದಲ್ಲಿ ಮತ್ತೊಂದು ಪಾತ್ರವೂ ಅಷ್ಟೇ ಮುಖ್ಯ ಅದು ಪವರ್ ಸ್ಟಾರ್ ಅಪ್ಪು ಅವರ ದೇವರ ಪಾತ್ರ. ಅಪ್ಪು ಅವರನ್ನು ಮತ್ತೆ ಸ್ಕ್ರೀನ್ ನಲ್ಲಿ ನೋಡುವುದೇ ನಮ್ಮೆಲ್ಲರ ಅದೃಷ್ಟ ಮತ್ತು ಕೊನೆ ಬಾರಿ ನೋಡುವುದು ನಮ್ಮ ದುರಾದೃಷ್ಟ!


ಅಪ್ಪು ಅವರನ್ನು ನೋಡುವಾಗ ಅವರ ಖದರ್, ಅವರ ಡ್ಯಾನ್ಸ್ ,ಆ ಲುಕ್, ಆ ಡೈಲಾಗ್ಸ್ ಹೊಡೆಯುವ ರೀತಿ ಕಣ್ಣಮುಂದೆ ಬಂದು, ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಎಷ್ಟೋ ಮಂದಿ ಚಿತ್ರ ನೋಡಿದ ಬಳಿಕ ಭಾವುಕರಾಗಿ ಅಪ್ಪು ಅವರನ್ನು ನೆನೆಸಿಕೊಳ್ಳುತ್ತಾ ಹೋದರು.


ಸಿನಿಮಾದಲ್ಲಿ ನಾಗಭೂಷಣ್, ಸಾಧುಕೋಕಿಲ, ರಂಗಾಯಣ ರಘುರಂತಹ ಅದ್ಭುತ ಕಲಾವಿದರು ಜತೆಯಾಗಿದ್ದು, ಚಿತ್ರದಲ್ಲಿ ಅವರ ಪಾತ್ರದಲ್ಲಿ ಬರುವ ನಗುವಿಗೆ ಆಡಿಯನ್ಸ್ ಫುಲ್ ಮಾರ್ಕ್ಸ್ ಕೊಡೋದು ಗ್ಯಾರೆಂಟಿ.
ಸಂಬಂಧಗಳು ಸುಖದ ಬೀಡಲ್ಲ. ಅಲ್ಲಿ ಕಷ್ಟಗಳಿರುತ್ತವೆ, ಸಮಸ್ಯೆಗಳಿರುತ್ತವೆ, ಸವಾಲುಗಳಿರುತ್ತವೆ, ಇವೆಲ್ಲವನ್ನಊ ಸಹಿಸಿಕೊಂಡು, ಸಂಬಳಿಸಿಕೊಂಡು ಹೋಗುವುದು ದಾಂಪತ್ಯ ಜೀವನದ ಯಶಸ್ಸಿನ ಗುಟ್ಟು. ಹೀಗೆ ಸೂಕ್ಷ್ಮ ಸಂದೇಶವನ್ನು ಚಿತ್ರ ಅಂತಿವಾಗಿ ನೀಡುತ್ತದೆ.
ಕ್ಲೈಮ್ಯಾಕ್ಸ್ ನಲ್ಲಿ ಪ್ರಭುದೇವ ಅವರೊಂದಿಗೆ ಅಪ್ಪು ಅವರ ‘ಬಾರೋ ರಾಜಾ’ ಹಾಡಿಗೆ ಚಪ್ಪಾಳೆ, ಶಿಳ್ಳೆ, ಅಳು ಒಟ್ಟಿಗೆ ಬರುತ್ತದೆ.



