ಪುನೀತ್ ರಾಜ್ ಕುಮಾರ್ ʼಜೇಮ್ಸ್ʼ ಚಿತ್ರದ ಬಳಿಕ ಮತ್ತೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಬೇಕು, ಅವರನ್ನು ಕಣ್ತುಂಬ ನೋಡಬೇಕು ಎನ್ನುವ ಅಭಿಮಾನಿಗಳ ಆಸೆ ʼಲಕ್ಕಿಮ್ಯಾನ್ʼ ಚಿತ್ರದ ಮೂಲಕ ಪೂರ್ತಿ ಆಗುತ್ತಿದೆ.
ʼಲಕ್ಕಿಮ್ಯಾನ್ʼ ಚಿತ್ರದಲ್ಲಿ ಅಪ್ಪು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಗೊತ್ತೇ ಇದೆ. ಚಿತ್ರ ತಂಡ ಚಿತ್ರದ ಕುರಿತು ಲೇಟೆಸ್ಟ್ ಆಪ್ಡೇಟ್ ವೊಂದನ್ನು ನೀಡಿದೆ. ಅದು ಚಿತ್ರದ ಟೀಸರ್ ರಿಲೀಸ್ ಕುರಿತ ವಿಷಯ.
ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ ನಟನೆಯ ʼಲಕ್ಕಿಮ್ಯಾನ್ʼ ತಮಿಳಿನ ʼಓ ಮೈ ಕಡವಳೇʼ ಚಿತ್ರದ ರಿಮೇಕ್. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ದೇವರ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೆ ಚಿತ್ರದ ಹೊಸ ಆಪ್ಡೇಟ್ ಏನೆಂದರೆ, ಇದೇ ತಿಂಗಳ 25 ರಂದು ಚಿತ್ರದ ಟೀಸರ್ ರಿಲೀಸ್ ಆಗಲಿದೆ.


ಟೀಸರ್ ಅಂದರೆ ಬರೀ ಟೀಸರ್ ಅಲ್ಲ, ಅಪ್ಪು ಅಭಿಮಾನಿಗಳಿಗೆ ಟೀಸರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪುನೀತ್ ರಾಜ್ ಕುಮಾರ್ ಚಿತ್ರದ ಪೋಸ್ಟರ್ ನಲ್ಲಿ ಮಿಂಚಿದ್ದಾರೆ. ಆ ಪೋಸ್ಟರ್ ವೈರಲ್ ಆಗಿತ್ತು.
ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಅಪ್ಪು ವಿಶೇಷ ಪಾತ್ರ ಮಾತ್ರವಲ್ಲದೆ, ಪ್ರಭುದೇವ ಅವರೊಂದಿಗೆ ಸ್ಟೆಪ್ ಹಾಕಿದ್ದು, ಅದು ಕೂಡ ಚಿತ್ರದಲ್ಲಿ ಇರಲಿದೆ.
ಲಕ್ಕಿಮ್ಯಾನ್ ಚಿತ್ರದ ರಿಲೀಸ್ ಡೇಟ್ ಶೀಘ್ರದಲ್ಲಿ ಆಗಲಿದೆ ಎಂದು ಚಿತ್ರ ತಂಡ ಹೇಳಿದೆ.

