ಡಾರ್ಲಿಂಗ್ ಕೃಷ್ಣ ಅವರ ‘ಲಕ್ಕಿಮ್ಯಾನ್’ ‘ಪವರ್’ ಫುಲ್ ಆಗಿ ಸೌಂಡ್ ಮಾಡುತ್ತಿದೆ.
ತಮಿಳಿನ ‘ಓ ಮೈ ಕಡವಳೆ’ ಚಿತ್ರದ ಕನ್ನಡ ರಿಮೇಕ್ ಸಿನಿಮಾ ‘ಲಕ್ಕಿಮ್ಯಾನ್’.


ಚಿತ್ರಕ್ಕಾಗಿ ಸಾವಿರಾರು ಮಂದಿ ವೇಟ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಅಭಿನಯಿರುವುದು. ‘ಜೇಮ್ಸ್’ ಮತ್ತೆ ಅಪ್ಪು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಇದೊಂದು ಫ್ಯಾಮಿಲಿ , ಕಾಮಿಡಿ ಅಂಶವುಳ್ಳ ಚಿತ್ರ. ಇದರಲ್ಲಿ ಪುನೀತ್ ರಾಜ್ ನಾಯಕನಿಗೆ ಪಾಠ ಹೇಳುವ ದೇವರಾಗಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಪೋಸ್ಟರ್ ಸಖತ್ ವೈರಲ್ ಆಗಿವೆ.


ಇತ್ತೀಚೆಗೆ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಅಪ್ಪು ದೇವರ ಅವತಾರ ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ.
ನಾಗೇಂದ್ರ ಪ್ರಸಾದ್ ಅವರು ಆ್ಯಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಅಪ್ಪು ಜೊತೆಗೆ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರು ಸ್ಪೆಷಲ್ ಡ್ಯಾನ್ಸ್ ನಲ್ಲಿ ಹೆಜ್ಜೆ ಹಾಕಿದ್ದಾರೆ.
ಪ್ರಭುದೇವ ಚಿತ್ರದ ಬಗ್ಗೆ ಮಾತಾನಾಡಿದ್ದು, ‘ಲಕ್ಕಿಮ್ಯಾನ್’ ಕುತೂಹಲ ಹೆಚ್ಚಿಸಿದೆ. ಪುನೀತ್ ರಾಜ್‍ಕುಮಾರ್ ಅವರು ಸರಳ ಸ್ವಭಾವದವರು, ಏನು ಹೇಳಿದರೂ ಅದನ್ನು ಅನುಸರಿಸುತ್ತಾರೆ. ಅವರು ಉತ್ತಮ ಡ್ಯಾನ್ಸರ್ ಕೂಡ ಎಂದಿದ್ದಾರೆ.



