2003 ರಲ್ಲಿ ʼಗೋಕರ್ಣʼಸಿನಿಮಾದಲ್ಲಿ ಉಪ್ಪಿ ಅವರ ಜೂನಿಯರ್ ಆಗಿ ಬಣ್ಣ ಹಚ್ಚಿದ್ದ ಸಂಜಯ್ ಈಗ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಲಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ – ತಬಲ ನಾಣಿ ನಟಿಸುತ್ತಿರುವ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಸಂಜಯ್ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಕಳೆದ ವಾರವಷ್ಟೇ ನೆರವೇರಿದೆ.
ಈ ಸಿನಿಮಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ, ಮಿಡಲ್ ಕ್ಲಾಸ್ ಹುಡುಗನಾಗಿ ಕಾಣಿಸಿಕೊಳ್ಳಲಿದ್ದು, ತಬಲ ನಾಣಿ ಅವರ ಮಗನ ಪಾತ್ರವನ್ನು ಸಂಜಯ್ ಅವರು ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಪ್ರೇಮ್ ಅವರು ಒಬ್ಬ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.


ಅಥರ್ವ ಆರ್ಯ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ತಂದೆ ಮಗನ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ.
ಎಪಿ ಅರ್ಜುನ್ ನಿರ್ದೇಶನ ʼಅದ್ಧೂರಿ ಲವರ್ʼ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ಸಂಜಯ್ ಮಾಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಫೆ.1 ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.



