HomeReviewಜನಮನ ಗೆಲ್ಲುತ್ತಿದೆ 'ಲವ್ ಮಾಕ್ಟೇಲ್' ಜೋಡಿಯ 'ಲವ್ ಬರ್ಡ್ಸ್'! ಹೇಗಿದೆ ಸಿನಿಮಾ?

ಜನಮನ ಗೆಲ್ಲುತ್ತಿದೆ ‘ಲವ್ ಮಾಕ್ಟೇಲ್’ ಜೋಡಿಯ ‘ಲವ್ ಬರ್ಡ್ಸ್’! ಹೇಗಿದೆ ಸಿನಿಮಾ?

ನಮ್ ಟಾಕೀಸ್.ಇನ್ ರೇಟಿಂಗ್ 【4/5】

‘ಲವ್ ಮಾಕ್ಟೇಲ್ ಜೋಡಿ’ ಎಂದೇ ಖ್ಯಾತರಾಗಿರುವ, ನಿಜ ಜೀವನದಲ್ಲೂ ದಂಪತಿಗಳಾದ ಡಾರ್ಲಿಂಗ್ ಕೃಷ್ಣ ಹಾಗು ಮಿಲನ ನಾಗರಾಜ್ ಅವರ ಜೋಡಿ ಕನ್ನಡಿಗರೆಲ್ಲರ ಅಚ್ಚುಮೆಚ್ಚು. ‘ಲವ್ ಮಾಕ್ಟೇಲ್’ ಹಾಗು ‘ಲವ್ ಮಾಕ್ಟೇಲ್ 2’ ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿ ಭಾರಿ ಯಶಸ್ಸು ಕಂಡ ಈ ಜೋಡಿ ತದನಂತರ ಒಂದರ ಬೆನ್ನಿಗೆ ಒಂದರಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ಹೀಗಿರುವಾಗ ಇವರಿಬ್ಬರೇ ನಾಯಕ ನಾಯಕಿಯಾಗಿ ನಟಿಸಿರುವ ಚಿತ್ರವೊಂದು ಇಂದು(ಫೆಬ್ರವರಿ 17) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅದುವೇ ‘ಲವ್ ಬರ್ಡ್ಸ್’. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾ ಜನಮನ ಗೆದ್ದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗೆ.

ದೀಪಕ್ ಹಾಗು ಪೂಜಾ ಈಗಿನ ಜನರೇಶನ್ ನವರು. ಮ್ಯಾಟ್ರಿಮೊನಿ ವೆಬ್ ಸೈಟ್ ನಲ್ಲಿ ಭೇಟಿಯಾಗಿ ಮದುವೆಯಾಗುತ್ತಾರೆ. ದೀಪಕ್ ಪೂಜಾ ಸೇರಿ ‘ದೀಪೂ’ ಆಗಿ ಸಂತಸದ ಜೀವನ ನಡೆಸುತ್ತಿರುತ್ತಾರೆ. ಇವರ ಈ ಜೀವನ ಹೇಗೆಲ್ಲ ಸಾಗುತ್ತದೆ, ಏನೆಲ್ಲಾ ಕಷ್ಟಗಳನ್ನ, ಟ್ವಿಸ್ಟ್ ಗಳನ್ನ ಇವರು ಎದುರಿಸಬೇಕಾಗುತ್ತದೆ ಎಂಬುದನ್ನ ಅತ್ಯಂತ ಅದ್ಭುತವಾಗಿ ಈ ಸಿನಿಮಾದ ಮೂಲಕ ಹೇಳಿದ್ದಾರೆ ನಿರ್ದೇಶಕರಾದ ಪಿ ಸಿ ಶೇಖರ್ ಅವರು. ನಾಯಕ ನಾಯಕಿಯಾಗಿ ಡಾರ್ಲಿಂಗ್ ಕೃಷ್ಣ ಹಾಗು ಮಿಲನ ನಾಗರಾಜ್ ತಮ್ಮ ಅದ್ಭುತವಾದ ಹೊಂದಾಣಿಕೆಯನ್ನ ತೆರೆಯ ಮೇಲೆ ಕೂಡ ನಿಭಾಯಿಸಿದ್ದಾರೆ. ಇವರಿಬ್ಬರ ಈ ಸುಂದರ ಜೋಡಿಯನ್ನ ತಮ್ಮ ಸಿನಿಮಾದ ಮೂಲಕ ಅಷ್ಟೇ ಅಂದವಾಗಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕರು. ಇನ್ನು ಕಥೆಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಂಯುಕ್ತ ಹೊರನಾಡ್, ಸಾಧು ಕೋಕಿಲ, ರಂಗಾಯಣ ರಘು, ಅವಿನಾಶ್, ವೀಣಾ ಸುಂದರ್ ಮುಂತಾದವರು ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವೀಣಾ ಸುಂದರ್ ಅವರ ಪಾತ್ರ ವೀಕ್ಷಕರಲ್ಲಿ ನಗು ತರಿಸುತ್ತದೆ.

ಒಟ್ಟಿನಲ್ಲಿ ಈಗಿನ ಕಾಲಘಟ್ಟದಲ್ಲಿ ಹಲವು ನವವಿವಾಹಿತರು, ಜೋಡಿಗಳು ಕಾಣುವಂತಹ ಕಷ್ಟಗಳನ್ನ ಸವಾಲುಗಳನ್ನ, ಅವರದೇ ಕಥೆಯನ್ನ, ತಮ್ಮ ಸಿನಿಮಾದ ಮೂಲಕ ಅದ್ಭುತವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ‘ಲವ್ ಬರ್ಡ್ಸ್’ ತಂಡ. ಸಾಮಾನ್ಯರ ಬದುಕಿನಲ್ಲಿ ಸಾಮಾನ್ಯವಾಗಿ ನಡೆಯುವಂತಹ ಒಂದು ಕಥೆಯನ್ನ, ಎಲ್ಲರಿಗೂ ಹತ್ತಿರವಾಗುವ ಹಾಗೆ, ಎಲ್ಲರನ್ನು ತಲುಪುವ ಹಾಗೆ ತಮ್ಮ ಸಿನಿಮಾದ ಮೂಲಕ ಪಿ ಸಿ ಶೇಖರ್ ಅವರು ಜನರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಳೆಯರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಆರಾಮವಾಗಿ ಕೂತು ನೋಡಬಹುದಾದಂತಹ ಸಿನಿಮಾ ಮಾಡಿ ಗೆದ್ದಿದ್ದಾರೆ ಎನ್ನಬಹುದು. ಕಡ್ಡಿಪುಡಿ ಚಂದ್ರು ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾ, ಸಿನಿಮಾ ಭಾವದಲ್ಲಾಗಲಿ, ಚಿತ್ರೀಕರಣದ ಪರಿಯಲ್ಲಾಗಲಿ ಎಲ್ಲೂ ಪ್ರೇಕ್ಷಕರಿಗೆ ನಿರಾಸೆಗೊಳಿಸುವುದಿಲ್ಲ. ಅರ್ಜುನ್ ಜನ್ಯ ಅವರ ಸಂಗೀತ ಕೂಡ ಮನಮುಟ್ಟುವಂತದ್ದೇ ಇದೆ. ಒಟ್ಟಿನಲ್ಲಿ ಈ ವಾರಂತ್ಯ ಮನೆಮಂದಿಯೆಲ್ಲಾ ಕೂತು ನೋಡಬಹುದಾದಂತಹ ಒಂದೊಳ್ಳೆ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಆಗಿ ‘ಲವ್ ಬರ್ಡ್ಸ್’ ಹೊರಹೊಮ್ಮಿದೆ.

RELATED ARTICLES

Most Popular

Share via
Copy link
Powered by Social Snap