ಹೊಸ ನಾಯಕನನ್ನು ಇಟ್ಟುಕೊಂಡು, ಹೊಸ ಬಗೆಯ ಕಥೆಯನ್ನು ಹೇಳಿರುವ ಶಶಾಂಕ್ ‘ಲವ್ 360’ ಮೂಲಕ ಪ್ರೇಕ್ಷಕರ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡು ಗೆದ್ದಿದ್ದಾರೆ.
ಈ ಹಿಂದಿನ ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಕಥೆಯಲ್ಲಿನ ಫ್ಲೇವರ್ ಬಿಟ್ಟು ಇಲ್ಲಿ ಥ್ರಿಲ್ಲರ್ ರೂಪದ ಕಥೆಯನ್ನು ಹೇಳಿದ್ದಾರೆ.
ಒಂದು ಮುಗ್ಧ ಪ್ರೇಮ ಕಥೆ. ಇಬ್ಬರ ನಡುವಿನ ಪ್ರೀತಿಗೆ ಎಲ್ಲೆಡೆ ಇರುವಂತೆ ಒಂದಷ್ಟು ಅಡೆ -ತಡೆಗಳಿರುತ್ತವೆ. ಈ ಸಂಕಷ್ಟದ ನಡುವೆ ಸಾಗುವ ಕಥೆಯೇ ‘ಲವ್ 360’.


ಮೊದಲ ಹಾಫ್ ಪ್ರೇಮ ಪ್ರಣಯದಲ್ಲಿ ನಡೆದರೂ, ಎಲ್ಲೋ ಒಂದು ಕಡೆ ನಿಧಾನವಾಗಿ ಸ್ಕ್ರೀನ್ ಪ್ಲೇ ಸಾಗುವುದು ಅರಿವಿಗೆ ಬರುತ್ತದೆ. ಎರಡನೇ ಹಾಫ್ ನಲ್ಲಿ ಲವ್ ಸ್ಟೋರಿಯೊಂದಿಗೆ ಥ್ರಿಲ್ಲರ್ ,ಮಿಸ್ಟರಿ ಬೆರೆಯುತ್ತದೆ. ಸೀಟಿನ ತುದಿಯಲ್ಲಿ ಪ್ರೇಕ್ಷಕರು ಬಂದು ಕೋರುತ್ತಾರೆ. ಕ್ಲೈಮ್ಯಾಕ್ಸ್ ಕೆಲ ಪ್ರಶ್ನೆಗಳನ್ನು ಉಳಿಸಿ ಹೋಗುತ್ತದೆ.
ನಾಯಕ ಪ್ರವೀಣ್ ಗೆ ಇದು ಚೊಚ್ಚಲ ಚಿತ್ರ. ಹೀರೋ ಲುಕ್, ಮ್ಯಾನರಿಸಂಗಳಿಂದ ಪ್ರವೀಣ್ ಪಳಗಿದ ನಟನ ಹಾಗೆ ಕಾಣುತ್ತಾರೆ. ಅವರ ಜತೆ ನಾಯಕಿಯಾಗಿ ಕಾಣಿಸಿಕೊಂಡಿರುವ ರಚನಾ ಒಂದು ಕಾಯಿಲೆಯಿಂದ ಬಳಲುತ್ತಿರುವ ಹುಡುಗಿಯಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಅವರ ಪ್ರೇಕ್ಷಕರ ಮನದಲ್ಲಿ ಕಚುಗುಳಿ ಇಡುತ್ತದೆ.


‘ಜಗವೇ ನೀನು ಗೆಳತಿಯೇ..’ ಹಾಡು ಥಿಯೇಟರ್ ಹೊರಗೆ ಬಂದ ಮೇಲೂ ನಾಲಗೆ ತುದಿಯಲ್ಲಿ ಗುನುಗುತ್ತದೆ. ಅರ್ಜುನ್ ಜನ್ಯ ಮ್ಯೂಸಿಕ್ ಕೂಡ ಚಿತ್ರದಲ್ಲಿ ಕಥೆಯ ಹಾಗೆಯೇ ಇಷ್ಟವಾಗುತ್ತದೆ.
ಲವ್ ಸ್ಟೋರಿಯೊಂದಿಗೆ ಥ್ರಿಲ್ಲರ್ ಜಾನರ್ ಸಿನಿಮಾವನ್ನು ನೀವು ಇಷ್ಟಪಡ್ತೀರಾ ಅಂದರೆ ‘ಲವ್ 360’ ಖಂಡಿತ ಇಷ್ಟವಾಗುತ್ತದೆ.

