HomeNews'ಲವ್ 360' ರಿಲೀಸ್ ಗೆ ರೆಡಿ: ಡಿಫ್ರೆಂಟ್ ಪ್ರೇಮ ಕಥೆ ಹೇಳಲು ಹೊರಟ್ರು ಶಶಾಂಕ್

‘ಲವ್ 360’ ರಿಲೀಸ್ ಗೆ ರೆಡಿ: ಡಿಫ್ರೆಂಟ್ ಪ್ರೇಮ ಕಥೆ ಹೇಳಲು ಹೊರಟ್ರು ಶಶಾಂಕ್

ಸ್ಯಾಂಡಲ್ ವುಡ್ ನಲ್ಲಿ ಯುವ ಪ್ರೇಕ್ಷಕರನ್ನು ಸೆಳೆಯಲು ‌ಮತ್ತೊಂದು ರೊಮ್ಯಾಂಟಿಕ್ ಕಥಾ ಹಂದರವುಳ್ಳ‌ ಚಿತ್ರ ರಿಲೀಸ್ ಗೆ ರೆಡಿಯಾಗಿದೆ.


ಶಶಾಂಕ್ ನಿರ್ದೇಶನದ ‘ಲವ್ 360’ ಆಗಸ್ಟ್ 19 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಚಿತ್ರ ಹಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಅದಕ್ಕೊಂದು ಕಾರಣ‌ ನಿರ್ದೇಶಕ ಶಶಾಂಕ್. ಈ ಹಿಂದೆ ‘ಮೊಗ್ಗಿನ ಮನಸ್ಸು’, “ಕೃಷ್ಣನ್‌ ಲವ್‌ಸ್ಟೋರಿ’, “ಕೃಷ್ಣಲೀಲಾ’ ಚಿತ್ರಗಳಿಗೆ ಆ್ಯಕ್ಷನ್ ಕಟ್ ಯಶಸ್ಸಾಗಿದೆ ಅವರು. ಈ ಚಿತ್ರದ ಮೂಲಕವೂ ಅದೇ ಯಶಸ್ಸಿನ ಟ್ರ್ಯಾಕ್ ನಲ್ಲಿ ಸಾಗುವ ನಿರೀಕ್ಷೆಯಿದೆ.


ಲವ್ ಕಂ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ನವ ಪ್ರತಿಭೆ ಪ್ರವೀಣ್ ಅವರು ನಾಯಕನಾಗಿ, ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.


ಅರ್ಜುನ್ ಮ್ಯೂಸಿಕ್ ನಲ್ಲಿ, ಸಿದ್ಧ್ ಶ್ರೀರಾಮ್, ಸಂಜಿತ್ ಹೆಗ್ಡೆ ಮೊದಲಾದ ಗಾಯಕರು ಹಾಡಿರುವ ಹಾಡು ಈಗಾಗಲೇ ಟ್ರೆಂಡ್ ಸೃಷ್ಟಿಸಿದೆ. ಟ್ರೇಲರ್ ‌ಕೂಡ ಗಮನ ಸೆಳೆದಿದೆ.

ಚಿತ್ರದ ಮೂರು ಹಾಡುಗಳು ಬಿಡುಗಡೆ ಆಗಿವೆ. ಈ ಮೂರು ಹಾಡುಗಳು ಮನಸ್ಸಿಗೆ ಕಚಗುಳಿ ನೀಡುತ್ತವೆ.

RELATED ARTICLES

Most Popular

Share via
Copy link
Powered by Social Snap