ನಮ್ ಟಾಕೀಸ್.ಇನ್ ರೇಟಿಂಗ್ 【4/5】
ಲಾಂಗ್ ಡ್ರೈವ್ ಯಾರಿಗೆ ಇಷ್ಟ ಇಲ್ಲ ಹೇಳಿ? ಲಾಂಗ್ ಡ್ರೈವ್ ಎಂದರೆ ನಮ್ಮ ಸ್ನೇಹಿತರು ಆಪ್ತರೊಂದಿಗೆ ಪ್ರೀತಿ ಪಾತ್ರರೊಂದಿಗೆ ಎಲ್ಲಿಗಾದರೂ ಲಾಂಗ್ ಡ್ರೈವ್ ಹೋಗಿ ಮೋಜು ಮಸ್ತಿ ಮಾತು ಕಥೆಯ ಸಂಭ್ರಮವೇ ಬೇರೆ. ಇಂತಹ ಲಾಂಗ್ ಡ್ರೈವ್ ಗಳಲ್ಲಿ ಯಾವಾಗಲೂ ಮೋಜು-ಮಸ್ತಿಯೇ ಇರುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ, ಕೆಲವೊಮ್ಮೆ ಒಂದಷ್ಟು ಚಾಲೆಂಜಿಂಗ್ ಸನ್ನಿವೇಶಗಳು ಎದುರಾಗುತ್ತವೆ, ಅಲ್ವಾ?
ಇದನ್ನೆಲ್ಲ ಯಾಕೆ ಹೇಳ್ತಿದ್ದೀವಿ ಅಂದ್ರೆ…ಇದೇ ವಾರ ಬಿಡುಗಡೆಗೊಂಡಿರುವ ‘ಲಾಂಗ್ ಡ್ರೈವ್’ ಎಂಬ ಚಿತ್ರ ಇಂತದ್ದೇ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಇಟ್ಟುಕೊಂಡು ಅದ್ಭುತವಾಗಿ ಮೂಡಿಬರುತ್ತಿದೆ.
ನಟ ಅರ್ಜುನ್ ಯೋಗಿ ಅವರು ನಾಯಕ ನಟನಾಗಿ , ಸುಪ್ರಿತ ನಾರಾಯಣ್ ಹಾಗೂ ತೇಜಸ್ವಿನಿ ಶೇಖರ್ ನಟಿಯರಾಗಿ ತೆರೆ ಹಂಚಿಕೊಂಡಿದ್ದಾರೆ. ಜೊತೆಗೆ ನಿರ್ಮಾಪಕ ಶಬರಿ ಮಂಜು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಬರಿ ಮಂಜು ಅವರ ಗುಡ್-ವಿಲ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಶ್ರೀರಾಜು ಅವರ ಅದ್ಭುತ ನಿರ್ದೇಶನದಲ್ಲಿ ಅಚ್ಚುಕಟ್ಟಾಗಿ ಮೂಡಿ ಬರುತ್ತಿರುವ ‘ಲಾಂಗ್ ಡ್ರೈವ್’ ಚಿತ್ರ ಸಿನಿ ಪ್ರಿಯರನ್ನು ರಂಜಿಸಲಿದೆ.


ಬೆಂಗಳೂರು, ಮೈಸೂರು, ತಾವರೆಕೆರೆ ಹಾಗೂ ರಾಮನಗರ ಸುತ್ತಮುತ್ತಲಿನ ಜಾಗಗಳಲ್ಲಿ ಶೂಟಿಂಗ್ ನಡೆದಿದ್ದು ಲಾಂಗ್ ಡ್ರೈವ್ ನಲ್ಲಿ ಹೋಗುವ ಹೀರೋ ಹೀರೋಯಿನ್ ಗೆ ಏನೆಲ್ಲಾ ತೊಂದರೆ ಬರುತ್ತದೆ ಹಾಗೂ ಅದನ್ನು ಅವರು ಹೇಗೆ ನಿವಾರಿಸುತ್ತಾರೆ ಎಂಬುದೇ ಈ ಚಿತ್ರ ಕಥೆಯ ಮುಖ್ಯ ಅಂಶ. ಸಮಸ್ಯೆಗಳು ಹಾಗೂ ಅನಾನುಕೂಲಗಳು ಯಾರಿಗೆ ಬರುವುದಿಲ್ಲ ಹೇಳಿ? ಅದನ್ನು ನಾವು ಎಷ್ಟು ಚೆನ್ನಾಗಿ ನಿಭಾಯಿಸುತ್ತೇವೆ ಎನ್ನುವುದು ನಮ್ಮ ಸಾಮರ್ಥ್ಯದ ಮೇಲೆ ಬಿಟ್ಟದ್ದು, ಈ ರೀತಿಯಾಗಿ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಅಂದರೆ ಇಟ್ಟುಕೊಂಡ ಈ ಚಿತ್ರ ಬಹಳ ಕೌತುಕ ಅಂಶಗಳನ್ನು ಇಟ್ಟುಕೊಂಡು ಇಡೀ ಕಥೆಯನ್ನು ಹೇಳುತ್ತದೆ.
ನಟಿ ಸುಪ್ರೀತ ನಾರಾಯಣ್ ಡಾಕ್ಟರ್ ಜಾನಕಿಯಾಗಿ ಪಾತ್ರ ನಿರ್ವಹಿಸುತ್ತಿದ್ದು ಅವರು ನಟ ಅರ್ಜುನ್ ಯೋಗಿಯವರು ನಟಿಸಿರುವ ಅರ್ಜುನ್ ಎಂಬ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಇಬ್ಬರು ಅರ್ಜುನ್ ಅವರ ಹುಟ್ಟಿದ ಹಬ್ಬದ ದಿನ ಲಾಂಗ್ ಡ್ರೈವ್ ಹೋಗುತ್ತಾರೆ. ಒಟ್ಟಿಗೆ ಒಳ್ಳೆಯ ರೀತಿಯಲ್ಲಿ ಸಮಯ ಕಳೆಯಬೇಕೆಂದುಕೊಂಡ ಈ ಜೋಡಿಯ ಬದುಕಿನಲ್ಲಿ ಒಂದಷ್ಟು ಸನ್ನಿವೇಶಗಳು ಎದುರಾಗಿ ಅದನ್ನು ಅವರು ಹೇಗೆ ನಿಭಾಯಿಸಿ ನಿರ್ವಹಿಸುತ್ತಾರೆ ಎಂಬುದೇ ಈ ಕಥೆಯಾಗಿದ್ದು ಸಖತ್ ಸಸ್ಪೆನ್ಸ್ ಅನ್ನು ಹೊಂದಿದೆ.
ಇದರಲ್ಲಿ ನಟ ಮಹೇಶ್ ಗುರು ಅವರು ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಅದ್ಭುತವಾಗಿ ನಟಿಸಿ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇಡೀ ಕಥೆ ಎಲ್ಲೂ ಬೋರ್ ಹೊಡಿಸದೆ ಅದ್ಭುತವಾಗಿ ಪ್ರತಿ ಕ್ಷಣವು ಕುತೂಹಲಗಳನ್ನು ಕೆರಳಿಸುತ್ತಾ ಕೊನೆಗೆ ಹ್ಯಾಪಿ ಎಂಡಿಂಗ್ ಜೊತೆಗೆ ಮುಕ್ತಾಯಗೊಳ್ಳುತ್ತದೆ. ಈ ಚಿತ್ರ ಖಂಡಿತವಾಗಿಯೂ ಒಂದು ಫೀಲ್ ಗುಡ್ ಮೂವಿಯಾಗಿದ್ದು, ಒಳ್ಳೆಯ ತಾರಾಗಣವನ್ನು ಕಟ್ಟಿಕೊಂಡು ಮಾಡಿರುವ ಈ ಚಿತ್ರ ಖಂಡಿತವಾಗಿಯೂ ಪ್ರೇಕ್ಷಕರಿಗೆ ನಿರಾಸೆ ಮಾಡುವುದಿಲ್ಲ. ಈಗಾಗಲೇ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿದ್ದು, ಆ ನಿರೀಕ್ಷೆಗಳನ್ನೆಲ್ಲ ಚಿತ್ರತಂಡ ಮುಟ್ಟಲಿದೆ ಎಂಬ ವಿಶ್ವಾಸದೊಂದಿಗೆ ಅಭಿಮಾನಿಗಳು ಪ್ರೇಕ್ಷಕರು ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.


ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು ವಿಕಾಸ್ ವಸಿಷ್ಠ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣದೊಂದಿಗೆ ರಾಮಿ ಶೆಟ್ಟಿ ಪವನ್ ಅವರ ಸಂಕಲನವಿರುವ ಈ ಹಾಡುಗಳಿಗೆ ಶರತ್ ಆಸ್ಕರ್, ವಿಕಾಸ್ ವೈಶಿಷ್ಟ ಹಾಗೂ ಜೀವನ್ ಅವರು ಸಾಹಿತ್ಯ ರಚಿಸಿದ್ದಾರೆ. ಹಾಗೆಯೇ ಕನ್ನಡದ ಪಾಪುಲರ್ ಗಾಯಕರಾದ ರಾಜೇಶ್ ಕೃಷ್ಣನ್, ಮಾನಸ ಹೊಳ್ಳ ಹಾಗೂ ಸ್ಪರ್ಶ ಆರ್ ಕೆ ಅವರ ಕಂಠ ಈ ಹಾಡುಗಳಿಗಿದೆ. ಚಿತ್ರದ ತಾರಾಗಣದಲ್ಲಿ ಮಹೇಶ್ ಗುರು, ಬಲ ರಾಜವಾಡಿ, ಮೋಹನ್ ಅನ್ನಹಳ್ಳಿ ಹಾಗೂ ಜಿಮ್ ಕೀರ್ತಿ ಸೇರಿದಂತೆ ಮಹನೀಯ ನಟರು ನಟಿಸಿದ್ದಾರೆ. ಈಗಾಗಲೇ ಬಹಳಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರಕ್ಕಾಗಿ ಅಭಿಮಾನಿಗಳು, ಪ್ರೇಕ್ಷಕರು, ಕನ್ನಡದ ಜನತೆ ಕಾಯುತ್ತಿದ್ದು ಚಿತ್ರತಂಡಕ್ಕೆ ಶುಭ ಹಾರೈಸುತ್ತೇವೆ.

