ಒಂದು ಜರ್ನಿಯಲ್ಲಿ ರೋಚಕತೆ ಇರುತ್ತದೆ. ಮೋಜು- ಮಸ್ತಿ ಇರುತ್ತದೆ. ಇವೆಲ್ಲಾ ಬಿಟ್ಟು ಜರ್ನಿಯಲ್ಲೂ ಬೇರೆ ರೀತಿಯ ಅನುಭವೂ ಆಗುತ್ತದೆ. ಒಂದು ಜರ್ನಿಯನ್ನು ಥ್ರಿಲ್ಲರ್ ಬಗೆಯಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕ ಶ್ರೀರಾಜ್.
ಇದೇ ವಾರ ‘ಲಾಂಗ್ ಡ್ರೈವ್’ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಗುಡ್‌ವೀಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಮಂಜುನಾಥ್‌ಗೌಡ ಬಿ.ಆರ್.(ಶಬರಿ ಮಂಜು) ಅವರು ನಿರ್ಮಿಸಿದ್ದಾರೆ.
ಅರ್ಜುನ್ ಯೋಗಿ, ಸುಪ್ರೀತಾ ಸತ್ಯನಾರಾಯಣ್, ತೇಜಸ್ವಿನಿ ಶೇಖರ್ ಹಾಗೂ ನಿರ್ಮಾಪಕ ಶಬರಿ ಮಂಜು ಈ ನಾಲ್ಕು ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ.


ಬೆಂಗಳೂರು, ತಾವರೆಕೆರೆ, ಮೈಸೂರು ಹಾಗೂ ರಾಮನಗರದ ಸುತ್ತಮುತ್ತ 35 ರಿಂದ 40 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಸಿನಿಮಾಕ್ಕೆ ‘ಯು/ಎ ಪ್ರಮಾಣ ಪತ್ರ ಸಿಕ್ಕಿದೆ.
ವಿಕಾಸ್ ವಸಿಷ್ಠ ಅವರ ಮ್ಯೂಸಿಕ್ ಸಂಯೋಜನೆಯಿದ್ದು, ಸಿನಿಮಾದಲ್ಲಿ 2 ಹಾಡುಗಳಿವೆ.
ರಾಮಿ ಶೆಟ್ಟಿ ಪವನ್ ಅವರ ಸಂಕಲನ, ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ, ಹಾಡುಗಳಿಗೆ ವಿಕಾಸ ವಸಿಷ್ಠ, ಶರತ್ ಆಸ್ಕರ್, ಜೀವನ್ ಅವರ ಸಾಹಿತ್ಯವಿದ್ದು, ರಾಜೇಶ್ ಕೃಷ್ಣನ್, ಮಾನಸ ಹೊಳ್ಳ, ಸ್ಪರ್ಶ ಆರ್.ಕೆ, ದನಿಯಾಗಿದ್ದಾರೆ. ಚಿತ್ರದ ಉಳಿದ ತಾರಾಗಣದಲ್ಲಿ ಬಲ ರಾಜ್ವಾಡಿ, ಮಹೇಶ್ ಗುರು, ಮೋಹನ್ ಅನ್ನಳ್ಳಿ ಮುಂತಾದವರಿದ್ದಾರೆ.



