‘ಲಾಂಗ್ ಡ್ರೈವ್’ ಹೀಗೊಂದು ನೈಜ ಘಟನೆ ಆಧಾರಿತ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಚಿತ್ರ ಫೆ.10 ರಂದು ರಿಲೀಸ್ ಆಗಲಿದೆ.
ಈ ಹಿಂದೆ ನಿರ್ದೇಶಕ ರವಿ ಶ್ರೀವತ್ಸ ಜತೆಗೆ ಕೆಲಸ ಮಾಡಿರುವ ಶ್ರೀರಾಜ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಯಾವುದೇ ಪೂರ್ವ ತಯಾರಿ ಇಲ್ಲದೆ ಲಾಂಗ್ ಡ್ರೈವ್ ಹೊರಟಾಗ ಏನೆಲ್ಲಾ ತೊಂದರೆ ಆಗುತ್ತದೆ ಎಂಬುದೇ ಈ ಸಿನಿಮಾದ ಒನ್ ಲೈನ್ ಸ್ಟೋರಿ.
ಒಂದು ಡ್ರೈವ್ ಹೋಗುವ ನಾಯಕ ನಾಯಕಿಗೆ ಎದುರಾಗುವ ಅನಿರೀಕ್ಷಿತ ಸವಾಲುಗಳನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.


ಲಾಂಗ್ ಡ್ರೈವ್’ ಚಿತ್ರದಲ್ಲಿ ಅರ್ಜುನ್ ಯೋಗಿ ನಾಯಕರಾಗಿದ್ದು, ನಟಿ ಸುಪ್ರೀತಾ ಸತ್ಯನಾರಾಯಣ ಮತ್ತು ನಟಿ ತೇಜಸ್ವಿನಿ ಶೇಖರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ಜತೆಗೆ ಕೆಲಸ ಮಾಡಿರುವ ಶ್ರೀರಾಜ್ ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ‘ಲಾಂಗ್ ಡ್ರೈವ್’ ಚಿತ್ರದ ಪೋಸ್ಟರ್ ಮತ್ತು ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿವೆ.
ಲಾಂಗ್ ಡ್ರೈವ್’ ಸಿನಿಮಾದಲ್ಲಿ ಶಬರಿ ಮಂಜು ಬಲ ರಾಜ್ವಾಡಿ, ಮಹೇಶ್ ಗುರು, ಮೋಹನ್ ಅನ್ನಳ್ಳಿ ಮತ್ತಿತರರು ನಟಿಸಿದ್ದಾರೆ. ‘ಲಾಂಗ್ ಡ್ರೈವ್’ ಸಿನಿಮಾದ ಮೂರು ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ನೀಡಿದ್ದಾರೆ.



