ಕಾಲಿವುಡ್ ನ ಸೂಪರ್ ಹಿಟ್ ಡೈರೆಕ್ಟರ್ ಲೋಕೇಶ್ ‘ವಿಕ್ರಮ್’ ಬಳಿಕ ದಳಪತಿ ವಿಜಯ್ ಅವರ 67ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿ ಗೊತ್ತೇ ಇದೆ.
ಈ ಹಿಂದೆ ವಿಜಯ್ ಅವರ ‘ಮಾಸ್ಟರ್’ ಸಿನಿಮಾಕ್ಕೆ ಡೈರೆಕ್ಟ್ ಮಾಡಿ ಕೋಟಿ ಕೋಟಿ ಕಮಾಯಿ ಮಾಡಿದ ಲೋಕೇಶ್ ಮತ್ತೊಮ್ಮೆ ವಿಜಯ್ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಹೈಪ್ ಹೆಚ್ಚಾಗಿದೆ.
ಸಂದರ್ಶನವೊಂದರಲ್ಲಿ ಲೋಕೇಶ್ ವಿಜಯ್ ಅವರ ಸಿನಿಮಾದ ಬಳಿಕ ಯಾರಿಗೆಲ್ಲಾ ಸಿನಿಮಾ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ವಿಜಯ್ ಅವರ ಸಿನಿಮಾದ ಬಳಿಕ ನಾನು ಕಮಲ್ ಹಾಸನ್ ರೊಂದಿಗೆ ಸಿನಿಮಾ ಮಾಡಲಿದ್ದೇನೆ. ಇದು ವಿಕ್ರಮ್ ಸಿನಿಮಾದ ಮುಂದುವರಿದ ಭಾಗವಾಗಿರಲಿದೆ. ಆದಾದ ಬಳಿಕ ಕಾರ್ತಿ ಅವರೊಂದಿಗೆ ’ಕೈತಿ-2′ ಸಿನಿಮಾಕ್ಕೆ ತಯಾರಿ ನಡೆಸಲಿದ್ದೇನೆ. ಆ ನಂತರ ಸೂರ್ಯ ಅವರ ರೋಲೆಕ್ಸ್ ಪಾತ್ರಕ್ಕೆ ಪ್ರತ್ಯೇಕವಾದ ಸಿನಿಮಾ ಮಾಡುವ ಯೋಜನೆಯಿದೆ ಎಂದಿದ್ದಾರೆ.
ಮುಂದಿನ ಹತ್ತು ವರ್ಷಗಳಿಗೆ ಆಗುವಷ್ಟು ಯೋಜನೆಗಳನ್ನು ಈಗಲೇ ಹಾಕಿಕೊಂಡಿದ್ದೇನೆ ಎಂದು ಲೋಕೇಶ್ ಅವರು ಹೇಳಿದ್ದಾರೆ.

