ವಿಜಯ್ ದೇವರಕೊಂಡ ರಫ್ & ಟಫ್ ಬಾಕ್ಸರ್ ಅವತಾರದಲ್ಲಿ ಕಾಣಿಸಿಕೊಂಡಿರುವ ‘ಲೈಗರ್’ ಚಿತ್ರ ದಿನದಿಂದ ದಿನಕ್ಕೆ ಹೈಪ್ ಕ್ರಿಯೇಟ್ ಮಾಡುತ್ತಲೇ ಇದೆ.


ಚಿತ್ರದ ಪೋಸ್ಟರ್ ರಿಲೀಸ್ ಆದ ಬಳಿಕ ವಿಜಯ್ ದೇವರಕೊಂಡ ಅವರ ಲುಕ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ರು. ಆ ಬಳಿಕ ಟೀಸರ್, ಹಾಡು, ಟ್ರೇಲರ್ ಸೂಪರ್ ಹಿಟ್ ಆಗಿತ್ತು.
ಇತ್ತೀಚೆಗೆ ಚಿತ್ರದ ‘ಅಕ್ಡಿ ಪಕ್ಡಿ’ ಪಾರ್ಟಿ ಹಾಡು ಯುವ ಮನಸ್ಸನ್ನು ರಂಜಿಸಿತು. ಇದೀಗ ಮತ್ತೊಂದು ಹಾಡು ಕೂಡ ಗಮನ ಸೆಳೆಯುತ್ತಿದೆ.


‘ವಾಟ್ ಲಗಾ ದೇಂಗೆ..’ ಹಾಡು ಬಿಡುಗಡೆ ಆಗಿದ್ದು, ಬಾಕ್ಸಿಂಗ್ ಜರ್ನಿಯ ತುಣುಕನ್ನು ತೋರಿಸಲಾಗಿದ್ದು, ಹಾಡು ಕೂಡ ಪವರ್ ಫುಲ್ ಆಗಿ ಮೂಡಿ ಬಂದಿದೆ. ಈಗಾಗಲೇ ಎಲ್ಲಾ ಭಾಷೆಯಲ್ಲೂ ಹಾಡು ಲಕ್ಷಕ್ಕೂ ಅಧಿಕ ವೀಕ್ಷಣೆ ಕೆಲವೇ ಗಂಟೆಗಳಲ್ಲಿ ಪಡೆದುಕೊಂಡಿದೆ.
ಸಾಕಷ್ಟು ತಯಾರಿ ಮಾಡಿಕೊಂಡು ವಿಜಯ್ ದೇವರಕೊಂಡ ಚೊಚ್ಚಲ ಬಾರಿ ಬಾಲಿವುಡ್ ಗೆ ಎಂಟ್ರಿಯಾಗಿದ್ದಾರೆ. ಅನನ್ಯ ಪಾಂಡೆ,ರಮ್ಯಾ ಕೃಷ್ಣನ್ ಹಾಗೂ ಬಾಕ್ಸಿಂಗ್ ರಿಂಗ್ ದಿಗ್ಗಜ ಚಿತ್ರದಲ್ಲಿ ಜಬರ್ ದಸ್ತ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸ್ಲಂ ಹುಡುಗನ ಬಾಕ್ಸಿಂಗ್ ಕನಸಿನ ಸ್ಪೂರ್ತಿದಾಯಕ ಕಥನವಾಗಿರುವ ‘ಲೈಗರ್’ ಪುರಿ ಜಗನ್ನಾಥ್ ಅವರ ನಿರೀಕ್ಷೆಯ ಚಿತ್ರ. ಇದೇ ಆಗಸ್ಟ್ 25 ರಂದು ಚಿತ್ರ ಐದು ಭಾಷೆಯಲ್ಲಿ ರಿಲೀಸ್ ಆಗಲಿದೆ.



