ಇತ್ತೀಚೆಗೆ ಸಿನಿಮಾರಂಗದಲ್ಲಿ ಹಿಟ್ ಆದ ಸಿನಿಮಾಗಳನ್ನು ಮರು ಬಿಡುಗಡೆ ಮಾಡುವುದು ಒಂದು ರೀತಿ ಟ್ರೆಂಡ್ ಆಗಿದೆ.ಕಲಾವಿದವೊಬ್ಬ ಇಂತಿಷ್ಟು ವರ್ಷ ಸಿನಿಮಾ ರಂಗದಲ್ಲಿರುವ ಕಾರಣಕ್ಕೆ ಅಥವಾ ಆ ಕಲಾವಿದನ ಸೂಪರ್ ಹಿಟ್ ಸಿನಿಮಾ ರಿಲೀಸ್ ಆಗಿ ಇಂತಿಷ್ಟು ವರ್ಷ ರಿಲೀಸ್ ಆಯಿತು ಎನ್ನಿವ ಕಾರಣಕ್ಕಾಗಿ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತದೆ.
ಈಗ ಸಾಲಿಗೆ ಪವನ್ ಕುಮಾರ್ ಅವರ ‘ಲೈಫು ಇಷ್ಟೇನೆ’ ಸಿನಿಮಾ ಸೇರಿದೆ.
2011ರಲ್ಲಿ ತೆರೆಕಂಡಿದ್ದ ಪವನ್ ಕುಮಾರ್ ನಿರ್ದೇಶನದ ಮೊದಲ ಸಿನಿಮಾ ಲೈಫು ಇಷ್ಟೇನೆ ಚಿತ್ರವನ್ನು ಆಯ್ದ ಚಿತ್ರಮಂದಿರಗಳಲ್ಲಿ ಇದೇ ಫೆಬ್ರವರಿ 10ರಂದು ಮರು ಬಿಡುಗಡೆ ಮಾಡಲಾಗುತ್ತಿದೆ.
ಈ ಕುರಿತು ನಿರ್ದೇಶಕ ಪವನ್ ಕುಮಾರ್ ಅವರು ಪೋಸ್ಟ್ ಮಾಡಿದ್ದಾರೆ.ಇದೇ ಫೆಬ್ರವರಿ 10ರಂದು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ನಿರ್ದೇಶಕ ಪವನ್ ಕುಮಾರ್ ಪೋಸ್ಟ್ ಹಂಚಿಕೊಂಡಿದ್ದು, ಪ್ರೇಮಿಗಳ ದಿನಾಚರಣೆಯ ವಾರದ ಪ್ರಯುಕ್ತ ಲೈಫು ಇಷ್ಟೇನೆ ಚಿತ್ರವನ್ನು ಮರು ಬಿಡುಗಡೆ ಮಾಡಲಾಗ್ತಿದೆ ಎಂದು ಬರೆದುಕೊಂಡಿದ್ದಾರೆ.
ದಿಗಂತ್, ಸಿಂಧು ಲೋಕನಾಥ್, ಸಂಯುಕ್ತ ಹೊರ್ನಾಡ್, ಸತೀಶ್ ನೀನಾಸಂ, ಅಚ್ಯುತ್ ಕುಮಾರ್ ಮುಂತಾದ ಕಲಾವಿದರು ನಟಿಸಿದ್ದರು.
ಸದ್ಯ ಪವನ್ ಕುಮಾರ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಧೂಮಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಹಾಗೂ ಅಪರ್ಣ ಬಾಲಮುರಳಿ ನಾಯಕ – ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

