ಬಾಲಿವುಡ್ ನಲ್ಲಿ ಸದ್ಯ ಬಹು ನಿರೀಕ್ಷೆಯ ದೊಡ್ಡ ಚಿತ್ರವೆಂದರೆ ಅದು ಅಮಿರ್ ಖಾನ್ ಅವರ ʼಲಾಲ್ ಸಿಂಗ್ ಚಡ್ಡಾʼ
ಹಾಲಿವುಡ್ ನ ʼಫಾರೆಸ್ಟ್ ಗಂಪ್ʼ ಚಿತ್ರದ ರಿಮೇಕ್ ಆಗಿರುವ ʼಲಾಲ್ ಸಿಂಗ್ ಚಡ್ಡಾʼ ಕಳೆದ ಕೆಲ ದಿನಗಳಿಂದ ಚರ್ಚೆಯಲ್ಲಿದೆ.
ಕೋವಿಡ್ ಕಾರಣದಿಂದ ರಿಲೀಸ್ ಡೇಟ್ ಮುಂದೆ ಹಾಕುತ್ತಲೇ ಬಂದ ಚಿತ್ರ, ಇದೀಗ ಆಗಸ್ಟ್ 11 ರಂದು ಅಧಿಕೃತವಾಗಿ ರಿಲೀಸ್ ಆಗಲಿದೆ.


ಲಾಲ್ ಚಡ್ಡಾವನ್ನು ಬಹಿಷ್ಕರಿಸಬೇಕು, ಚಿತ್ರವನ್ನು ಯಾರೂ ನೋಡಬಾರದೆಂದು ಕಳೆದ ಕೆಲ ದಿನಗಳಿಂದ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯೇ ಆಗಿತ್ತು. ಇದಕ್ಕೆ ಏನೂ ಪ್ರತಿಕ್ರಿಯೆ ನೀಡದ ನಟ ಅಮಿರ್ ಈಗ ತಮ್ಮ ಮೌನ ಮುರಿದಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಈ ಬಗ್ಗೆ ಮಾತಾನಾಡಿರುವ ಅವರು, ʼದಯವಿಟ್ಟು ನನ್ನ ಚಿತ್ರವನ್ನು ನೋಡಿ, ಚಿತ್ರವನ್ನು ಬಹಿಷ್ಕರಿಸಬೇಡಿ. ಈ ಬಗ್ಗೆ ನನಗೆ ತುಂಬಾ ಬೇಸರವಾಗುತ್ತಿದೆ. ನನಗೆ ಭಾರತ ಇಷ್ಟವಿಲ್ಲ ಅಂತ ಹಲವು ಮಂದಿ ತಪ್ಪಾಗಿ ತಿಳಿದುಕೊಂಡಿದ್ದಾರೆ. ಸತ್ಯ ಅದಲ್ಲ. ಆದರೆ ಜನ ಇದನ್ನು ಒಪ್ಪುತ್ತಿಲ್ಲ. ನನ್ನ ಮನಸ್ಸಿಗೆ ತುಂಬಾ ನೋವಾಗುತ್ತದೆ. ದಯವಿಟ್ಟು ಚಿತ್ರವನ್ನು ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
2015 ರಲ್ಲಿ ಅವರು ನಮ್ಮ ದೇಶವು ತುಂಬಾ ಅಸಹಿಷ್ಣು ದೇಶ, ಆದರೆ ಕೆಟ್ಟದ್ದನ್ನು ಹರಡುವ ಜನರಿದ್ದಾರೆ” ಎಂದು ಹೇಳಿದ್ದರು. ಅಲ್ಲದೇ, ಅವರ ಪತ್ನಿ ಕಿರಣ್ ರಾವ್ ಅವರು ತಮ್ಮ ಮಕ್ಕಳ ಸುರಕ್ಷತೆಗಾಗಿ ದೇಶವನ್ನು ಬಿಡಲು ಯೋಚಿಸಿದ್ದಾರೆ ಎನ್ನುವ ಹೇಳಿಕೆ ಹಾಗೂ ಶಿವಲಿಂಗಕ್ಕೆ ಹಾಲಿನ ಅಭಿಷೇಕದ ಬಗ್ಗೆ ಹೇಳಿಕೆ ನೀಡಿ ವಿವಾದದ ಕೇಂದ್ರ ಬಿಂದುವಾಗಿದ್ದರು.
ಇದೀಗ ಇದೇ ಹೇಳಿಕೆ ಅವರ, ಚಿತ್ರಕ್ಕೆ ಮುಳ್ಳುವಾಗುತ್ತಿದೆ. ಚಿತ್ರವನ್ನು ನೋಡಿಯೆಂದು ನಟ ಮನವಿ ಮಾಡಿಕೊಂಡರೂ, ಅದು ಯಾವ ರೀತಿ ಸಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಚಿತ್ರದಲ್ಲಿ ಅಮಿರ್ ಖಾನ್ ರೊಂದಿಗೆ ಕರೀನಾ ಕಪೂರ್, ನಾಗಚೈತನ್ಯ,ಶಾರುಖ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

