ಯೋಗರಾಜ್ ಭಟ್ ಶಿವರಾಜ್ ಕುಮಾರ್ ಅವರಿಗೆ ಡೈರೆಕ್ಟ್ ಮಾಡಲಿದ್ದಾರೆ. ಶಿವಣ್ಣನೊಂದಿಗೆ ಪ್ರಭುದೇವ ಕೂಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಈಗ ಚಿತ್ರ ಚಿತ್ರೀಕರಣವನ್ನು ಭಟ್ರು ಆರಂಭಿದ್ದಾರೆ.
ಗಾಳಿಪಟ-2 ಸಕ್ಸಸ್ ಆದ ಬೆನ್ನಲ್ಲೇ ಯೋಗರಾಜ್ ಭಟ್ ತಮ್ಮ ಮುಂದಿನ ಚಿತ್ರದಲ್ಲಿ ನಿರತರಾಗಿದ್ದಾರೆ.
ಚಿತ್ರಕ್ಕೆ ‘ಕುಲದಲ್ಲಿ ಕೀಳ್ಯಾವುದೋ’ ಎಂದು ಟೈಟಲ್ ಇಡಲಾಗಿದೆ. ಸರಳವಾಗಿ ಮುರ್ಹೂತ ನಡೆದ ಬಳಿಕ ಚಿತ್ರದ ಕೆಲಸ ಕಾರ್ಯಗಳನ್ನು ಆರಂಭವಾಗಿತ್ತು. ಈಗ ಚಿತ್ರೀಕರಣವನ್ನು ಆರಂಭಿಸಿದೆ.
ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್, ಪ್ರಭುದೇವ ಅವರು ಭಾಗಿಯಾಗಿದ್ದಾರೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪೊಲೀಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ, ಪ್ರಭುದೇವ ಜೊತೆಯಾಗಿ ಸೆಟ್ ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.
ಇನ್ನು ಚಿತ್ರದ ನಾಯಕಿ ಯಾರು ಎನ್ನುವುದು ಪ್ರಶ್ನೆಯಾಗಿತ್ತು. ಮೂಲಗಳ ಪ್ರಕಾರ ಈ ಹಿಂದೆ ʼರಾಜಕುಮಾರʼ ಹಾಗೂʼ ಜೇಮ್ಸ್ʼ ಚಿತ್ರದಲ್ಲಿ ಕಾಣಿಸಿಕೊಂಡ ಪ್ರಿಯಾ ಆನಂದ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದರಂತೆ, ಹಾಗೆಯೇ ಇನ್ನೊಬ್ಬ ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ಚಿತ್ರದ ಬಗೆಗಿನ ಇತರ ಮಾಹಿತಿ ಹೊರ ಬೀಳಲಿದೆ.

