ನಮ್ ಟಾಕೀಸ್. ಇನ್ ರೇಟಿಂಗ್ [ 4 / 5 ]
350-400 ಸ್ಕ್ರೀನ್ ಗಳಲ್ಲಿ ಇಂದು ಡಿಬಾಸ್ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ರಿಲೀಸ್ ಆಗಿದೆ. ಬೆಳಗ್ಗಿನಿಂದಲೇ ಸಿನಿಮಾವನ್ನು ನೋಡಲು ಸಾಲುಗಟ್ಟಿ ಅಭಿಮಾನಿಗಳು ನಿಂತು ಸಿನಿಮಾವನ್ನು ನೋಡಿ ಡಿಬಾಸ್ ರನ್ನು ಚಪ್ಪಾಳೆ, ಶಿಳ್ಳೆ ಹಾಕಿಕೊಂಡು ಎಂಜಾಯ್ ಮಾಡಿದ್ದಾರೆ.
ಮೊದಲೇ ಊಹಿಸಿದಂತೆ ಇದೊಂದು ಶಾಲಾ ಉಳಿವಿನ ಕಥೆ. ಕ್ರಾಂತಿ ರಾಯಣ್ಣ (ದರ್ಶನ್) ತನ್ನ ಹಳೆಯ ಶಾಲೆ ಶತಮಾನದ ಕಾರ್ಯಕ್ರಮಕ್ಕೆ ಬರುತ್ತಾನೆ. ಈ ವೇಳೆ ಶಾಲೆಯ ಮೇಲೆ ಉದ್ಯಮಿವೊಬ್ಬ ಕಣ್ಣಾಕಿಟ್ಟಿರುತ್ತಾನೆ. ಇದನ್ನು ತಡೆಯಲು ಕ್ರಾಂತಿ ಮುಂದಾಗುತ್ತಾನೆ. ಈ ಸಂಘರ್ಷದಲ್ಲಿ ಸರ್ಕಾರ ಕನ್ನಡ ಶಾಲೆಗಳ ಕುರಿತು ಚಿಂತಿಸುವಂತೆ ಮಾಡುತ್ತಾರೆ.


ಎಲ್ಲದರಲ್ಲೂ ಸಮಾನತೆ ಸಾರುವ ನೀತಿಯನ್ನು ‘ಕ್ರಾಂತಿ’ ಹೇಳುತ್ತದೆ.
ನಾಯಕಿ ರಚಿತಾ ರಾಮ್ ಹಾಡುಗಳಿಂದಲೇ ಹೆಚ್ಚು ಸೆಳೆಯುತ್ತಾರೆ.ರವಿಚಂದ್ರನ್, ಬಿ ಸುರೇಶ್, ಅಚ್ಯುತ್ ಕುಮಾರ್, ಉಮಾಶ್ರೀ, ಸಾಧುಕೋಕಿಲ, ಮುಖ್ಯಮಂತ್ರಿ ಚಂದ್ರು, ಸಂಯುಕ್ತ ಹೊರನಾಡು, ಧರ್ಮಣ್ಣ, ಅವರು ಕಾಣಿಸಿಕೊಂಡಿದ್ದು, ಇವರಲ್ಲಿ ಬಿ.ಸುರೇಶ್ ಹಾಗೂ ರವಿಚಂದ್ರನ್ ಪ್ರಧಾನವಾಗಿ ಪ್ರೇಕ್ಷಕರಿಗೆ ಕಾಣಿಸುತ್ತಾರೆ.
ಅತಿಥಿ ಪಾತ್ರದಲ್ಲಿ ಸುಮಲತಾ ಅಂಬರೀಶ್,ಹಾಸ್ಯದಲ್ಲಿ ರವಿಶಂಕರ್ ಮಿಂಚಿದ್ದಾರೆ.
‘ಬೊಂಬೆ ಬೊಂಬೆ’ ನಂತಹ ಹಾಡುಗಳು ಕೇಳುಗರನ್ನು ರಂಜಿಸುತ್ತದೆ.
ಒಟ್ಟಿನಲ್ಲಿ ‘ಕ್ರಾಂತಿ’ ಕಥೆ ಸ್ವಲ್ಪ ನೋಡಿದಾಗೆ ಅನ್ನಿಸಿದರೂ ಮಾಸ್ ಮಾಸಲಾ ಮಾಡಿ ತೋರಿಸಿರುವುದು ಇಷ್ಟವಾಗಬಹುದು.



