

ಗಣೇಶ ಹಬ್ಬ ಬಂದಿದೆ. ಎಲ್ಲೆಡೆ ಸಂಭ್ರಮ -ಸಡಗರ ಜೋರಾಗಿ ನಡೆಯುತ್ತಿದೆ. ಎರಡು ವರ್ಷದ ಬಳಿಕ ಗಣಪನಿಗೆ ಜೈಕಾರ ಹಾಕಲು ಭಕ್ತಾಭಿಮಾನಿಗಳು ಸಜ್ಜಾಗಿದ್ದಾರೆ. ಮನೆ,ಮನ, ಬೀದಿಯಲ್ಲೂ ಗಣೇಶನ ಪೂಜೆ ನಡೆಯುತ್ತವೆ.
ಚಿತ್ರರಂಗದಲ್ಲಿ ಗಣೇಶ ಹಬ್ಬ ಬಹಳ ವಿಶೇಷ. ಹೊಸ ಸಿನಿಮಾದ ಪೋಸ್ಟರ್, ಹಾಡು, ಟೀಸರ್ ರಿಲೀಸ್ ಮಾಡಿ ಗಣೇಶೋತ್ಸವಕ್ಕೆ ಬಣ್ಣದ ಲೋಕವೂ ಸ್ಪೆಷಲ್ ಆಗಿ ರಂಗೇರುತ್ತದೆ.
ಕೆಲ ಸ್ಟಾರ್ ಹಳುಯ ಗಣಪನನ್ನು ತಮ್ಮ ಮನೆಯಲ್ಲಿಟ್ಟು ಪೂಜಿಸುತ್ತಾರೆ. ವಿಘ್ನ ನಿವಾರಕ ವಿಘ್ನೇಶ್ವರನಿಗೆ ಆರಾಧನೆ ಮಾಡಿ ಹಬ್ಬವನ್ನು ಆಚರಿಸಿ, ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯವನ್ನು ಕೋರುತ್ತಾರೆ.
ಡಿಬಾಸ್ ದರ್ಶನ್ ಗಣೇಶ ಹಬ್ಬಕ್ಕೆ “ಕ್ರಾಂತಿ” ಚಿತ್ರ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಗೌರಿ ಸುತನಾದ ಶ್ರೀ ವರಸಿದ್ಧಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಇದರೊಂದಿಗೆ ಅವರ ಮುಂದಿನ ಚಿತ್ರ “ಕ್ರಾಂತಿ” ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.
ಸದ್ಯ ದರ್ಶನ್ ಕ್ರಾಂತಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅವರ 56 ನೇ ಸಿನಿಮಾ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮುಹೂರ್ತ ನೆರವೇರಿತ್ತು.

