ಡಿ ಬಾಸ್ ದರ್ಶನ್ ಅವರ ಬಹು ನಿರೀಕ್ಷಿತ ʼಕ್ರಾಂತಿʼ ರಿಲೀಸ್ ಗೂ ಮುನ್ನವೇ ಹವಾ ಕ್ರಿಯೇಟ್ ಮಾಡಿದೆ. ಚಿತ್ರದ ಪ್ರಚಾರ ಜೋರಾಗಿ ನಡೆಯುತ್ತಿದೆ.
ಅಭಿಮಾನಿಗಳ ಎಲ್ಲೆಡೆ ʼಕ್ರಾಂತಿʼಯ ಪೋಸ್ಟರ್ ಹಿಡಿದು ಪ್ರಚಾರದಲ್ಲಿ ತೊಡಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಶಿಕ್ಷಣದ ವಿಷಯತ ಕುರಿತು ಸಾಗುವ ಚಿತ್ರವಾಗಿರುವ ʼಕ್ರಾಂತಿʼಗೆ ವಿ.ಹರಿಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ. ಯಜಮಾನ ಹಿಟ್ ಬಳಿಕ ಮತ್ತೆ ಇಬ್ಬರೂ ಒಂದಾಗಿದ್ದು, ಶೈಲಜಾ ನಾಗ್ ಅವರು ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗೆ ಚಿತ್ರದ ಮೇಕಿಂಗ್ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಚಿತ್ರ ಮತ್ತೊಂದು ಫೋಟೋ ಸದ್ದು ಮಾಡುತ್ತಿದೆ.


ಕ್ರಾಂತಿ ಚಿತ್ರೀಕರಣವನ್ನು ಮುಗಿಸಿದ್ದು, ಈಗ ಡಿ ಬಾಸ್ ತಮ್ಮ ಪಾತ್ರಕ್ಕೆ ಡಬ್ ಮಾಡುತ್ತಿದ್ದು, ಶೀಘ್ರದಲ್ಲಿ ಚಿತ್ರದ ಬಗ್ಗೆ ದೊಡ್ಡ ಆಪ್ಡೇಟ್ ಸಿಗುವ ಸಾಧ್ಯತೆಗಳಿವೆ. ದಾಸ ಡಬ್ ಮಾಡುತ್ತಿರುವ ಫೋಟೋವನ್ನು ಡಿಬೀಟ್ಸ್ ಮ್ಯೂಸಿಕ್ ಹಂಚಿಕೊಂಡಿದೆ.
ಕ್ರಾಂತಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಅಭಿಮಾನಿಗಳು ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.



