ಚಾಲೇಜಿಂಗ್ ದರ್ಶನ್ ಅವರ ‘ಕ್ರಾಂತಿ’ ತಂಡ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ.
ಸಿನಿಮಾದ ಹಾಡುಗಳನ್ನು ಗ್ರ್ಯಾಂಡ್ ಅಗಿ ರಿಲೀಸ್ ಮಾಡಿರುವ ಚಿತ್ರ ತಂಡ, ಹಾಡುಗಳು ಸೂಪರ್ ಹಿಟ್ ಆದ ಬಳಿಕ ಇದೀಗ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಕನ್ನಡ ಶಾಲಾ ಉಳಿವಿನ ಕುರಿತಾದ ಸಿನಿಮಾದ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗಲಿದೆ.ಒಂದೊಂದು ಹಾಡನ್ನು ಒಂದೊಂದು ಊರಿನಲ್ಲಿ ರಿಲೀಸ್ ಮಾಡುತ್ತಿರುವ ಚಿತ್ರ ತಂಡ ಹೊಸ ವರ್ಷದಂದು ಟ್ರೇಲರ್ ಡೇಟ್ ರಿವೀಲ್ ಮಾಡಿ ಕುತೂಹಲ ಹೆಚ್ಚಿಸಿದೆ.
ರಚಿತಾ ರಾಮ್ ದರ್ಶನ್ ಅವರಿಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಜ.7 ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ಡಿಬಾಸ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಶೈಲಜಾ ನಾಗ್ ,ಬಿ.ಸುರೇಶ್ ಅವರು ಬಂಡವಾಳ ಹಾಕಿದ್ದು ಜ.26 ರಂದು ಸಿನಿಮಾ ತೆರೆಗೆ ಬರಲಿದೆ.

