HomeNews'ಕ್ರಾಂತಿ' ಹಾಡುಗಳು ಸೂಪರ್ ಹಿಟ್: ಹೆಚ್ಚಾಯಿತು ನಿರೀಕ್ಷೆ

‘ಕ್ರಾಂತಿ’ ಹಾಡುಗಳು ಸೂಪರ್ ಹಿಟ್: ಹೆಚ್ಚಾಯಿತು ನಿರೀಕ್ಷೆ

ಚಾಲೇಜಿಂಗ್ ದರ್ಶನ್ ಅವರ ‘ಕ್ರಾಂತಿ’ ಹಬ್ಬ ಶುರುವಾಗಿದೆ. ಸಿನಿಮಾ‌ ಬಿಡುಗಡೆಗೂ‌ ಮುನ್ನ ಅಭಿಮಾನಿಗಳು ಪ್ರಚಾರದ ಮೂಲಕ ‘ಕ್ರಾಂತಿ’ ಯನ್ನು ಆರಂಭಿಸಿದ್ದಾರೆ.

ಈಗಾಗಲೇ ಸಿನಿಮಾದ ಮೂರು ಹಾಡುಗಳು ರಿಲೀಸ್ ಆಗಿದ್ದು, ಸದ್ದು ಮಾಡುತ್ತಿದೆ.

ಕನ್ನಡ ಶಾಲಾ ಉಳಿವಿನ ಕುರಿತಾದ ಸಿನಿಮಾದ ಮೊದಲ ‘ಧರಣಿ ಮಂಡಲ’ ರಿಲೀಸ್ ಆಗಿ ಕೆಲವೇ ದಿನಗಳು ಕಳೆದಿದೆ. ಆ ಹಾಡು ಸೂಪರ್ ಹಿಟ್ ಆದ ಬಳಿಕ ಚಿತ್ರತಂಡ ಮತ್ತೊಂದು ಹಾಡನ್ನು ರಿಲೀಸ್ ಮಾಡಿದೆ.

ಹೊಸಪೇಟೆಯಲ್ಲಿ ಎರಡನೇ ಹಾಡು ಬಿಡುಗಡೆಯಾಗಿದ್ದು, ವಿ.ಹರಿಕೃಷ್ಣ ಮ್ಯೂಸಿಕ್ ನೀಡಿರುವ ಸೋನು ನಿಗಮ್ ಹಾಡಿರುವ, ಯೋಗರಾಜ್ ಭಟ್ ಸಾಹಿತ್ಯ ಬರೆದಿರುವ ‘ಬೊಂಬೆ ಬೊಂಬೆ’ ಹಾಡಿನಲ್ಲಿ ಡಿಬಾಸ್ ದರ್ಶನ್ ತನ್ನ ಪ್ರಿಯತಮೆಯ ಅಂದವನ್ನು ವರ್ಣಿಸುವ ಹಾಗೆ ಹಾಡು ಚಿತ್ರಿತವಾಗಿದೆ. ದರ್ಶನ್ ಹಾಗೂ ರಚಿತಾ ರಾಮ್ ಇಬ್ಬರು ಬ್ಯೂಟಿಫುಲ್ ‌ಲುಕ್ ನಲ್ಲಿ ಕಾಣಿಸುತ್ತಾರೆ. ಈ ಹಾಡು ಯೂಟ್ಯೂಬ್ ನಲ್ಲಿ 7.3 ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ.

ಇನ್ನು ಇತ್ತೀಚೆಗೆ ರಿಲೀಸ್ ಹುಬ್ಬಳ್ಳಿಯಲ್ಲಿ ರಿಲೀಸ್ ಆಗಿರುವ ‘ಪುಷ್ಪಾವತಿ’ ಹಾಡು ಡ್ಯಾನ್ಸ್ ನಂಬರ್ ಹಾಡಾಗಿ ಸಖತ್ ಕಿಕ್ ಕೊಡುತ್ತಿದೆ. ಹಾಡಿನಲ್ಲಿ ಡಿಬಾಸ್ ಸ್ಟೆಪ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಯೂಟ್ಯೂಬ್ ನಲ್ಲಿ 5 ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಶೈಲಜಾ ನಾಗ್ ,ಬಿ.ಸುರೇಶ್ ಅವರು ಬಂಡವಾಳ ಹಾಕಿದ್ದು ಜ.26 ರಂದು ಸಿನಿಮಾ ತೆರೆಗೆ ಬರಲಿದೆ.
ರಚಿತಾ ರಾಮ್, ಸುಮಲತಾ ಅಂಬರೀಶ್, ರವಿಚಂದ್ರನ್, ಉಮಾಶ್ರೀ, ಸಂಯುಕ್ತ ಹೊರ್ನಾಡ್ ಮತ್ತು ವೈನಿಧಿ ಜಗದೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಚಿತ್ರಕ್ಕೆ ಕರುಣಾಕರ್ ಛಾಯಾಗ್ರಹಣವಿದ್ದರೆ, ಶಶಿಧರ್ ಅಡಪ ಕಲಾಕೃತಿಯನ್ನು ನಿಭಾಯಿಸುತ್ತಿದ್ದಾರೆ.

RELATED ARTICLES

Most Popular

Share via
Copy link
Powered by Social Snap