ಚಾಲೇಜಿಂಗ್ ಸ್ಟಾರ್ ದರ್ಶನ್ ಅವರ ‘ಕ್ರಾಂತಿ’ ಭರ್ಜರಿ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ರಿಲೀಸ್ ಗೂ ಮುನ್ನವೇ ‘ಕ್ರಾಂತಿ’ ಅಭಿಮಾನಿಗಳ ಪಾಲಿಗೆ ಹಬ್ಬವಾಗಿದೆ. ಈ ಹಬ್ಬಕ್ಕೆ ಕಾರಣವಾಗಿರುವುದು ಸಿನಿಮಾದ ಲಿರಿಕಲ್ ವಿಡಿಯೋ ಹಾಡು ‘ಧರಣಿ’.
ಧರಣಿ ಮಂಡಲ ಮಧ್ಯದಲ್ಲಿ ಮೆರೆಯುವ ಕನ್ನಡ ದೇಶದಲ್ಲಿ… ಎಂದು ಶುರುವಾಗುವ ಹಾಡು ಕನ್ನಡ ನಾಡು- ನುಡಿಯನ್ನು ಕಲಿಸುವ ಕನ್ನಡ ಶಾಲೆಯ ಸುಂದರ ತಾಣವನ್ನು ತೋರಿಸುತ್ತದೆ. ನಟ ದರ್ಶನ್ ಶೂಟು ಬೂಟು ತೊಟ್ಟು ಕನ್ನಡ ಶಾಲೆ ಹಳೆಯ ವಿದ್ಯಾರ್ಥಿಯಂತೆ ಭಾಷಾ ಪ್ರೇಮವನ್ನು ಮೆರೆಯುತ್ತಾರೆ. ಇನ್ನು ಹಾಡಿನಲ್ಲಿ ರಚಿತಾ ರಾಮ್, ಅಚ್ಯುತ್ ಕುಮಾರ್, ಬಿ.ಸುರೇಶ್ ಅವರ ಪಾತ್ರದ ಝಲಕನ್ನು ತೋರಿಸಲಾಗಿದೆ.
ಕಲರ್ ಫುಲ್ ಆಗಿ ಹಾಡು ಮೂಡಿ ಬಂದಿದ್ದು, ನಿರ್ದೇಶಕ ವಿ.ಹರಿಕೃಷ್ಣ ಮ್ಯೂಸಿಕ್ ನಲ್ಲಿ ವಿ.ನಾಗೇಂದ್ರ ಪ್ರಸಾದ್ ಅವರ ಅರ್ಥಪೂರ್ಣ ಕನ್ನಡ ಸಾಹಿತ್ಯಕ್ಕೆ ಪಂಚಮ್ ಜೀವ, ಸಂತೋಷ್ ವೆಂಕಿ, ಅನಿರುದ್ದ ಶಾಸ್ತ್ರಿ, ವಿಹಾನ್, ಮಾದ್ವೆಶ್ ಭಾರದ್ವಾಜ್ ಧ್ವನಿ ಗೂಡಿಸಿದ್ದಾರೆ.
ಹಾಡಿನ ಪ್ರತಿ ಫ್ರೇಮ್ ಕೂಡ ರೀಚ್ ಆಗಿ ಮೂಡಿ ಬಂದಿದೆ. ಹಾಡು ರಿಲೀಸ್ ಆಗಿ ಎರಡು ದಿನ ಕಳೆದಿದ್ದು ಎರಡು ದಿನದಲ್ಲಿ 3 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚಕೊಂಡಿದ್ದಾರೆ.
ವಿ.ಹರಿಕೃಷ್ಣ ನಿರ್ದೇಶನ, ಶೈಲಜಾ ನಾಗ್ ಮತ್ತು ಬಿ ಸುರೇಶ ನಿರ್ಮಿಸಿರುವ ಕ್ರಾಂತಿ ಚಿತ್ರದಲ್ಲಿ ರಚಿತಾ ರಾಮ್, ಸುಮಲತಾ ಅಂಬರೀಶ್, ರವಿಚಂದ್ರನ್, ಉಮಾಶ್ರೀ, ಸಂಯುಕ್ತ ಹೊರ್ನಾಡ್ ಮತ್ತು ವೈನಿಧಿ ಜಗದೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕರುಣಾಕರ್ ಛಾಯಾಗ್ರಹಣವಿದ್ದರೆ, ಶಶಿಧರ್ ಅಡಪ ಕಲಾಕೃತಿಯನ್ನು ನಿಭಾಯಿಸುತ್ತಿದ್ದಾರೆ.

