ಡಿಬಾಸ್ ದರ್ಶನ್ ಅವರ ಬಹು ನಿರೀಕ್ಷಿತ ‘ಕ್ರಾಂತಿ’ ಅಬ್ಬರಕ್ಕೆ ಡೇಟ್ ನಿಗದಿಯಾಗಿದೆ. ಮುಂದಿನ ವರ್ಷ ಜನವರಿ 26 ರಂದು ಸಿನಿಮಾ ತೆರೆಗೆ ಬರಲಿದೆ.
ಸಿನಿಮಾದ ಅಂಗವಾಗಿ ಡಿಬಾಸ್ ಈಗಾಗಲೇ ಹತ್ತಾರು ಕಡೆ ಸಂದರ್ಶನವನ್ನು ನೀಡುತ್ತಿದ್ದಾರೆ. ವಿ.ಹರಿಕೃಷ್ಣ ನಿರ್ದೇಶನ ಮಾಡಿರುವ ಸಿನಿಮಾ ಶೈಲಜಾ ನಾಗ್ ಅವರು ನಿರ್ಮಾಣ ಮಾಡಿದ್ದಾರೆ.
ಸಿನಿಮಾ ತಂಡದಿಂದ ಬಿಗ್ ಅಪ್ಡೇಟ್ ವೊಂದು ಹೊರ ಬಿದ್ದಿದೆ. ಇದೇ ಡಿ.10 ‘ಕ್ರಾಂತಿ’ ಯಿಂದ ಮೊದಲ ಹಾಡು ‘ಧರಣಿ’ ರಿಲೀಸ್ ಆಗಲಿದೆ.
ಈ ಬಗ್ಗೆ ಸ್ಪೆಷಲ್ ಅನೌನ್ಸ್ ಮೆಂಟ್ ಮಾಡಿರುವ ಚಿತ್ರ ತಂಡ ಯೂಟ್ಯೂಬ್ ನಲ್ಲಿ ಹಾಡಿನ ಸಣ್ಣ ತುಣುಕು ರಿಲೀಸ್ ಮಾಡಿ, ದಾಸ ಬಾಯಿಯಿಂದಲೇ ವಿಶೇಷ ಘೋಷಣೆಯನ್ನು ಮಾಡಿದೆ.
ಇದೇ ಡಿ.10 ರಂದು ಮೈಸೂರಿನ ವಿಜಯ ಥಿಯೇಟರ್ ಮುಂಭಾಗದಲ್ಲಿ ಹಾಡನ್ನು ರಿಲೀಸ್ ಮಾಡಲಿದ್ದು, ಈ ಹಾಡಿನ ಸಮಾರಂಭದಲ್ಲಿ ದರ್ಶನ್ ಅವರು ನಿರೂಪಕನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಅಪಾರ ಜನರ ಮುಂದೆ ದರ್ಶನ್ ನಿರೂಪಣೆ ಮಾಡಿ, ಹಾಡನ್ನು ವಿಶೇಷವಾಗಿ ರಿಲೀಸ್ ಮಾಡಲಿದ್ದಾರೆ.
ಕನ್ನಡ ಶಾಲಾ ಅಳಿವು – ಉಳಿವಿನ ಕಥೆಯನ್ನು ‘ಕ್ರಾಂತಿ’ ಒಳಗೊಂಡಿದೆ.

