“ಬಿಗ್ ಬಾಸ್ ಓಟಿಟಿ ” ಖ್ಯಾತಿಯ ಅರ್ಜುನ್ ರಮೇಶ್ ನಟನೆಯ “ಕೌಟಿಲ್ಯ” ಚಿತ್ರ ಇದೇ ಶುಕ್ರವಾರ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿದೆ.


ಚಿತ್ರದ ಬಗ್ಗೆ ಮಾತಾನಾಡುವ ನಿರ್ದೇಶಕ ಪ್ರಭಾಕರ್ ಶೇರಖಾನೆ, ಇದೊಂದು ವಿಭಿನ್ನ ಕಥಾಹಂದರದ ಚಿತ್ರ, ಚಿತ್ರದ ಟ್ರೇಲರ್ ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ನೀವೆಲ್ಲಾ ನೀಡಿರುವ ಧನ್ಯವಾದಗಳೆಂದರು.
ಈ ಹಿಂದೆ “ಶನಿ” ಹಾಗೂ ಇತರೆ ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿರುವ ಅರ್ಜುನ್ ರೆಡ್ಡಿ ನಾಯಕನಾಗಿ ನಟಿಸುತ್ತಿರುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.


ನನ್ನದು ಈ ಚಿತ್ರದಲ್ಲಿ ಆರ್ಕಿಟೆಕ್ಟ್ ಇಂಜಿನಿಯರ್ ಪಾತ್ರ. ಒಬ್ಬ ಇಂಜಿನಿಯರ್ ಚಾಣಕ್ಯನ ತಂತ್ರಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ಹೇಳಿದರು.
ಚಿತ್ರದಲ್ಲಿ ಪ್ರಿಯಾಂಕ ಚಿಂಚೋಳಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

