ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಇತ್ತೀಚಿಗೆ ವಿಭಿನ್ನ ಕಂಟೆಂಟ್ ವುಳ್ಳ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ʼಮಾಲ್ಗುಡಿ ಡೇಸ್ʼ ಬಳಿಕ ʼ ಸೀತಾರಾಮ್ ಬಿನೋಯ್ʼ ಚಿತ್ರದಲ್ಲಿ ನಟಿಸಿದ್ದ ವಿಜಯ್ ರಾಘವೇಂದ್ರ ಈಗ ಮತ್ತೊಮ್ಮೆ ಖಾಕಿ ತೊಟ್ಟು ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಸಸ್ಪೆನ್ಸ್ – ಥ್ರಿಲ್ಲರ್ ʼಸೀತಾರಾಮ್ ಬಿನೋಯ್ʼ ವನ್ನು ದೇವಿ ಪ್ರಕಾಶ್ ಶೆಟ್ಟಿ ನಿರ್ದೇಶನ ಮಾಡಿದ್ದರು.
ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿತ್ತು. ಈ ಖುಷಿಯಿಂದಲೇ ಚಿನ್ನಾರಿ ಮುತ್ತ ಮತ್ತೊಮ್ಮೆ ದೇವಿ ಪ್ರಕಾಶ್ ಶೆಟ್ಟಿ ಅವರೊಂದಿಗೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.
‘ಕೇಸ್ ಆಫ್ ಕೊಂಡಾಣʼ ಚಿತ್ರದ ಮೂಲಕ ಇಬ್ಬರ ಕಾಂಬಿನೇಷನ್ ಜೊತೆಯಾಗಲಿದೆ. ಚಿತ್ರದ ಮುಹೂರ್ತ ನೆರವೇರಿದೆ. ಫೋಸ್ಟರ್ ಗಮನ ಸೆಳೆಯುತ್ತಿದೆ.
ಈ ಸಿನಿಮಾಕ್ಕೆ ಹಿರಿಯ ಪತ್ರಕರ್ತ ಜೋಹಿ ಅವರು, ಸಂಭಾಷಣೆ ಬರೆದಿದ್ದಾರೆ.


“ಈ ಟೀಂ ಬಂದು ಕಥೆ ಹೇಳಿದಾಗ ನಾನು ತುಂಬಾ ಎಕ್ಸೈಟ್ ಆದೆ. ಈ ಹುಡುಗರ ಹತ್ತಿರ ಬಹಳ ಕಲಿಯುವುದು ಇದೆ ಅನಿಸುತ್ತದೆ. ಸುಂದರವಾದ ತಂಡ, ಸುಂದರವಾದ ಕಥೆ. ಬಹಳ ಸುಂದರವಾಗಿ ಪ್ರೆಸೆಂಟ್ ಮಾಡಲು ಹೊರಟಿದ್ದಾರೆ. ನಿಜವಾಗಲೂ ಬಹಳ ಸಂತೋಷವಾಗುತ್ತಿದೆ.” ಎಂದು ಜೋಗಿ ಹೇಳಿದರು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ವಿಜಯ್ ರಾಘವೇಂದ್ರ ಅವರೊಂದಿಗೆ ಭಾವನಾ ಮೆನನ್ ಅವರು ಕೂಡ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ʼದಿಯಾʼ ಖ್ಯಾತಿಯ ಖುಷಿ ವೈದ್ಯಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಾತ್ವಿಕ್ ಹೆಬ್ಬಾರ್ ಮತ್ತು ದೇವಿಪ್ರಸಾದ್ ಶೆಟ್ಟಿ ಜೊತೆಗೆ ಅರವಿಂದ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ.
ಚಿತ್ರ ತಂಡ ಶೂಟಿಂಗ್ ಗೆ ಸಿದ್ದತೆಯನ್ನು ನಡೆಸುತ್ತಿದೆ.

