ನಟ ಕೋಮಲ್ ಲಾಂಗ್ ಗ್ಯಾಪ್ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ. ‘ಕಾಲಾಯ ನಮಃ’ ಚಿತ್ರದಿಂದ ಕೋಮಲ್ ನಟನೆಗೆ ಮತ್ತೆ ಮರಳಿದ್ದಾರೆ.
ಈ ನಡುವೆ ಕೋಮಲ್ ಅವರ ಮತ್ತೊಂದು ಚಿತ್ರದ ಬಗ್ಗೆ ಸುದ್ದಿ ಹೊರ ಬಿದ್ದಿದೆ. ಕಾಮಿಡಿ, ಡ್ರಾಮಾ ಚಿತ್ರದಲ್ಲಿ ಕೋಮಲ್ ಮತ್ತೊಮ್ಮೆ ಬಣ್ಣ ಹಚ್ಚಲಿದ್ದಾರೆ.
ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಶ್ರೀನಿವಾಸ ಮಂಡ್ಯ ಕೋಮಲ್ ಅವರಿಗೆ ‘ರೋಲೆಕ್ಸ್’ ಸಿನಿಮಾವನ್ನು ಮಾಡಲಿದ್ದಾರೆ.
ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿಯಲ್ಲಿ ಅನಿಲ್ ಕುಮಾರ್ ಎಸ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಜೆಸ್ಸಿ ಗಿಫ್ಟ್ ಮ್ಯೂಸಿಕ್, ರಾಕೇಶ್ ಸಿ ತಿಲಕ್ ಅವರು ಛಾಯಾಗ್ರಹಣ ಮಾಡಲಿದ್ದಾರೆ.
ಜನವರಿಯಲ್ಲಿ ಸಿನಿಮಾ ಸಟ್ಟೇರಲಿದೆ.

