HomeSportsಚೆನ್ನೈ ಎದುರಿನ ಪಂದ್ಯದಿಂದ ಹೊರಗುಳಿಯುತ್ತಾರ ಕನ್ನಡಿಗ ಕೆ ಎಲ್ ರಾಹುಲ್!

ಚೆನ್ನೈ ಎದುರಿನ ಪಂದ್ಯದಿಂದ ಹೊರಗುಳಿಯುತ್ತಾರ ಕನ್ನಡಿಗ ಕೆ ಎಲ್ ರಾಹುಲ್!

ಕನ್ನಡಿಗ ಕೆ ಎಲ್ ರಾಹುಲ್ ಸದ್ಯ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಲ್ಲಿ ಒಬ್ಬರು. ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ 2023ನೇ ಆವೃತ್ತಿಯಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿರುವ ‘ಲಕ್ನೋ ಸೂಪರ್ ಜಯಂಟ್ಸ್’ ತಂಡದ ನಾಯಕನಾಗಿದ್ದಾರೆ. ಬ್ಯಾಟಿಂಗ್ ನಲ್ಲಿ ಕೊಂಚ ವೈಫಲ್ಯತೆ ಕಾಣುತ್ತಿದ್ದರೂ ಕೂಡ, ಮಂದಗತಿಯ ಬ್ಯಾಟಿಂಗ್ ನ ಜೊತೆಗೇ ತಂಡದ ಬೆನ್ನೆಲುಬಾಗಿ ಕೆ ಎಲ್ ನಿಂತಿದ್ದರು. ಆದರೆ ಈಗ ಹಿಂದಿನ ಪಂದ್ಯದಲ್ಲಿ ಅನುಭವಿಸಿದ ನೋವಿನ ಕಾರಣದಿಂದಾಗಿ ಲಕ್ನೋ ತಂಡ ಆಡಲಿರುವ ಮುಂದಿನ ಪಂದ್ಯದಿಂದ ಕೆ ಎಲ್ ರಾಹುಲ್ ಹೊರಗುಳಿಯುವ ಸಾಧ್ಯತೆಗಳಿವೆ.

ಕೆ ಎಲ್ ರಾಹುಲ್ ನಾಯಕತ್ವದ ‘ಲಕ್ನೋ ಸೂಪರ್ ಜಯಂಟ್ಸ್’ ತಂಡ ಇದಕ್ಕಿಂತ ಮುಂಚೆ ಎದುರಾಗಿದ್ದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ. ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ನಡೆದ ಕಡಿಮೆ ರನ್ ಗಳ ರೋಚಕ ಪಂದ್ಯದಲ್ಲಿ ಬೆಂಗಳೂರು ತಂಡ 18ರನ್ ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ ಪ್ರತೀ ಪಂದ್ಯದಲ್ಲೂ ಲಕ್ನೋ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಕೆ ಎಲ್ ರಾಹುಲ್ ತಂಡ ಈ ಬಾರೀ ಬ್ಯಾಟಿಂಗ್ ಗೆ ಬಂದದ್ದು, 11ನೇ ದಾಂಡಿಗನಾಗಿ. ಇದಕ್ಕೆ ಕಾರಣ ಪಂದ್ಯದ ಮೊದಲ ಅರ್ಧದಲ್ಲಿ ಫೀಲ್ಡಿಂಗ್ ಮಾಡುವಾಗ ರಾಹುಲ್ ಅವರಿಗೆ ಆದ ಪೆಟ್ಟು. ನಾಯಕ ಫಾಫ್ ಅವರು ಹೊಡೆದಂತಹ ಬೌಂಡರಿಯನ್ನು ತಡೆಯಲು ಓಡಿದ ಕೆ ಎಲ್ ರಾಹುಲ್, ಕಾಲು ನೋವಿನಿಂದ ಬಳಲಲು ಆರಂಭಿಸಿದ್ದಾರೆ. ತೀವ್ರವಾದ ನೋವು ಕಾಣಿಸಿಕೊಂಡ ಪರಿಣಾಮ ಕೆ ಎಲ್ ರಾಹುಲ್ ಅಂಕಣದಿಂದ ಹೊರಹೊರಟರು. ಇದೇ ಕಾರಣಕ್ಕೆ ರಾಹುಲ್ ಇಡೀ ಪಂದ್ಯದಿಂದಲೇ ಹೊರ ಕೂರಬೇಕಾದ ಪರಿಸ್ಥಿತಿ ಎದುರಾಯಿತು. ಅವರ ಬದಲಾಗಿ ಕೃನಾಲ್ ಪಾಂಡ್ಯ ಅವರು ತಂಡವನ್ನ ಮುನ್ನಡೆಸಿದರು.

ಇಂದು ಮದ್ಯಾಹ್ನ 3:30ಕ್ಕೆ ಅದೇ ಏಕಾನ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜಯಂಟ್ಸ್ ತಂಡ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಎದುರಿಸಲಿದೆ. ಕೆ ಎಲ್ ರಾಹುಲ್ ಅವರು ಕಂಡಂತಹ ಇಂಜುರಿ ಕೊಂಚ ತೀವ್ರವಾಗಿದ್ದು, ಅವರು ಇಂದಿನ ಪಂದ್ಯವನ್ನು ಕೂಡ ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಕೃನಾಲ್ ಪಾಂಡ್ಯ ತಂಡವನ್ನ ಮುನ್ನಡೆಸಲಿದ್ದಾರೆ. ಕೆ ಎಲ್ ಬದಲಿಗೆ ಸೌತ್ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ಅವರು ತಂಡದ ಆರಂಭಿಕ ಆಟಗಾರನಾಗಿ ಈ ಸಾಲಿನ ಐಪಿಎಲ್ ನ ಮೊದಲ ಪಂದ್ಯವನ್ನು ಆಡುವ ಸಾಧ್ಯತೆಗಳಿವೆ.

RELATED ARTICLES

Most Popular

Share via
Copy link
Powered by Social Snap