ಸ್ಯಾಂಡಲ್ ವುಡ್ ನ ಕಿಶೋರ್ ಪ್ರತಿಭಾವಂತ ನಟ ಎನ್ನುವುದು ಗೊತ್ತೇ ಇದೆ. ಅವರ ಪ್ರತಿಭೆ ಅವರನ್ನು ಬಹುಭಾಷೆಯಲ್ಲೂ ಮಿಂಚುವಂತೆ ಮಾಡಿದೆ.
ನೆಗೆಟಿವ್, ನಾಯಕಣ ಖಳನಾಯಕ.. ಹೀಗೆ ಎಲ್ಲಾ ಪಾತ್ರಕ್ಕೂ ಜೀವ ತುಂಬುವ ಕಿಶೋರ್ ಈಗ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. ಅದು ಪೂರ್ಣ ಪ್ರಮಾದ ನಾಯಕನಾಗಿ.
ಸದ್ಯ ವಸಂತಬಾಲನ್ ನಿರ್ದೇಶನದ ವೆಬ್ ಸೀರೀಸ್ ವೊಂದರಲ್ಲಿ ಬ್ಯುಸಿಯಾಗಿದ್ದು ಲಕ್ನೋನಲ್ಲಿ ಶೂಟಿಂಗ್ ನಲ್ಲಿದ್ದಾರೆ.
‘ರೆಡ್ ಕಾಲರ್’ ಎನ್ನುವ ಸಿನಿಮಾದ ಮೂಲಕ ಪೂರ್ಣ ಪ್ರಮಾಣದಲ್ಲಿ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಕಿಶೋರ್ ಈ ಬಗ್ಗೆ ಮಾತಾನಾಡುತ್ತಾ, ‘ರೆಡ್ ಕಾಲರ್’ ನನ್ನ ಮೊದಲ ಪ್ರಮಾಣದ ಹಿಂದಿ ಚಿತ್ರವಾಗಿರಲಿದೆ. ನನ್ನ ಸ್ನೇಹಿತ ಸಂಗೀತ ಸಂಯೋಜಕರಮ ಧರ್ಮೇಂದ್ರ ಅವರು ಕಥೆ ಬರೆದಿದ್ದು, ‘ರಥಾವರ’ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಹಿಂದಿ ಚಿತ್ರ. ‘ರೆಡ್ ಕಾಲರ್’ ಗಾಗಿ ಸ್ನೇಹಿತರು ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಚಿತ್ರದ ಬಹುಪಾಲು ಪಾತ್ರದಲ್ಲಿ ಬೆಂಗಳೂರಿನ ಕಲಾವಿದರು ಇರಲಿದ್ದಾರೆ ಎಂದು ಹೇಳಿದ್ದಾರೆ.

