ಬಹುಭಾಷಾ ನಟ ಕಿಶೋರ್ ಅವರ ಟ್ವಿಟರ್ ಖಾತೆಯನ್ನು ಇತ್ತೀಚೆಗಷ್ಟೇ ಟ್ವಿಟರ್ ಅಮಾನತುಗೊಳಿಸಿತ್ತು.ಏಕಾಏಕಿ ಖಾತೆ ಅಮಾನತುಗೊಂಡಿದ್ದಕ್ಕೆ ಹಲವರು ಟ್ವಿಟರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಯಾವ ಕಾರಣಕ್ಕಾಗಿ, ಯಾವ ಟ್ವೀಟ್ ಈ ರೀತಿ ಆಗಿದೆ ಎಂದು ಪ್ಯಾನ್ಸ್ ಗಳು ಪ್ರಶ್ನಿಸಿ, ಟ್ವೀಟ್ ಮಾಡಿದ್ದರು. ಈ ಬಗ್ಗೆ ಈಗ ಸ್ವತಃ ನಟ ಕಿಶೋರ್ ಅವರೇ ಫೇಸ್ ಬುಕ್ ಮೂಲಕ ಮಾಹಿತಿ ಕೊಟ್ಟಿದ್ದಾರೆ.
ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೆ. ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು ನನ್ನ ಯಾವ ಪೋಸ್ಟಿನಿಂದಲೂ ಅಲ್ಲ. ಡಿಸೆಂಬರ್ 20 ನೇ ತಾರೀಖು 2022 ರಂದು ಹ್ಯಾಕ್ ಮಾಡಲಾಗಿದ್ದರಿಂದ ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳೆಂದಿದ್ದಾರೆ



