ಕನ್ನಡದ ನಿರ್ದೇಶಕ ಪ್ರಶಾಂತ್ ರಾಜ್ ಅವರು ಮೊದಲ ಬಾರಿ ತಮಿಳಿನಲ್ಲಿ ಚಿತ್ರ ಮಾಡುತ್ತಿದ್ದು ‘ಕಿಕ್’ ಚಿತ್ರದಲ್ಲಿ ಸಂತಾನಂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ.
ಚಿತ್ರ ತಮಿಳು ಆದರೂ ಚಿತ್ರದಲ್ಲಿ ಕನ್ನಡದ ಖ್ಯಾತ ಪ್ರತಿಭೆಗಳೂ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರ ಸಟ್ಟೇರಿದ ದಿನದಂದಲೂ ಸದ್ದು ಮಾಡುತ್ತಿದ್ದು, ಈಗ ಚಿತ್ರದ ‘Saturday is Cominguu’ ಎನ್ನುವ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ ಆಗಿದೆ.
ನಾಯಕ ನಟ ಸಂತಾನಂ ಮೊದಲ ಬಾರಿ ಹಾಡನ್ನು ಹಾಡಿದ್ದಾರೆ. ಟಪ್ಪಂಗುಚ್ಚಿ ಮ್ಯೂಸಿಕ್ ನ್ನು ಅರ್ಜುನ್ ಜನ್ಯ ನೀಡಿದ್ದಾರೆ. ಹಾಡು ಕೇಳಲು ಡ್ಯಾನ್ಸ್ ನಂಬರ್ ನಂತೆ ಇದ್ದು, ರಾಗಿಣಿ ದ್ವಿವೇದಿ ಮೈ ಬಳುಕುಸಿದ್ದಾರೆ.
ಚಿತ್ರದಲ್ಲಿ ಸಂತೋಷ್ ಆಗಿ ಸಂತಾನಂ ಕಾಣಿಸಿಕೊಳ್ಳಲಿದ್ದು, ನಾಯಕಿಯಾಗಿ ತಾನ್ಯಾ ಹೋಪ್ ಶಿವನಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಾಮಿಡಿ ಕಿಂಗ್ ಬ್ರಹ್ಮನಂದಂ ಡಾ. ವಾಲಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ರಾಗಿಣಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
.

