ಕಿಚ್ಚ ಸುದೀಪ್ ಅವರಿಗೆ ಪ್ಯಾನ್ ಇಂಡಿಯಾದಲ್ಲಿ ಅಭಿಮಾನಿ ವರ್ಗವಿದೆ. ಅವರ ಇತ್ತೀಚಿನ ʼವಿಕ್ರಾಂತ್ ರೋಣʼ ಚಿತ್ರವನ್ನು ನೋಡಿ ದೇಶ – ವಿದೀಶಿಗರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
ಇಂದು ಬಾದ್ ಷಾ ಕಿಚ್ಚ ಅವರ ಹುಟ್ಟು ಹಬ್ಬ. ಸಾವಿರಾರು ಅಭಿಮಾನಿಗಳು ಕಿಚ್ಚನಿಗೆ ವಿಶ್ ಮಾಡಲು ಶುರು ಮಾಡಿದ್ದಾರೆ. ನಟನ ಹೆಸರಿನಲ್ಲಿ ಹಲವಾರು ಸೇವೆಗಳನ್ನು ಮಾಡುವ ಮೂಲಕ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಾರೆ.
ಅಂಚೆ ಇಲಾಖೆಯಿಂದ ಕಿಚ್ಚನ 25 ವರ್ಷದ ಸಿನಿ ಜರ್ನಿಗೆ ಗೌರವವಾಗಿ ʼಅಂಚೆ ಲಕೋಟೆʼ ಯನ್ನು ಬಿಡುಗಡೆ ಮಾಡಲಾಗುತ್ತಿದೆ.


ಒಡಿಶಾದ ಸಮುದ್ರ ತೀರದಲ್ಲಿ ಖ್ಯಾತ ಮರಳು ಶಿಲ್ಪಿ ಮಾನಸ್ ಕುಮಾರ್ ಎನ್ನುವವರು ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ಮಾಡಿ ಗಮನ ಸೆಳೆದಿದ್ದಾರೆ. ಈ ಶಿಲ್ಪ 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ.
ಅದರಲ್ಲಿ ಹೀರೋ ಆಫ್ ಮಿಲಿಯನ್ ಹಾರ್ಟ್ಸ್ ಕಿಚ್ಚ ಸುದೀಪ್ ಸರ್ ಎಂದು ಬರೆದು ಹುಟ್ಟುಹಬ್ಬದ ಶುಭಾಶಯವನ್ನು ಹೇಳಲಾಗಿದೆ. ವಿಶೇಷವೆಂದರೆ ಮರಳು ಶಿಲ್ಪದ ಪಕ್ಕದಲ್ಲಿ ಕನ್ನಡವೇ ನಮ್ಮಮ್ಮ ಎಂದು ಬರೆಯಲಾಗಿದೆ.
ಸದ್ಯ ಮರಳು ಶಿಲ್ಪದ ಫೋಟೋಗಳು ವೈರಲ್ ಆಗಿವೆ. ಮಾನಸ್ ಕುಮಾಋ ಈ ಹಿಂದೆ 2020 ರಲ್ಲಿ ವಿಷ್ಣುವರ್ಧನ್ ಅವರ ಮರಳು ಶಿಲ್ಪವನ್ನು ರಚಿಸಿದ್ದರು.

