ಬಣ್ಣದ ಲೋಕದಲ್ಲಿ ಸ್ಟಾರ್ ಗಳ ನಡುವೆ ಆಗಾಗ ಕೆಲ ಭಿನ್ನಾಭಿಪ್ರಾಯ ಮೂಡುವುದು ಸಹಜ. ಕಳೆ ಕೆಲ ಸಮಯದಿಂದ ದರ್ಶನ್ – ಸುದೀಪ್ ನಡುವಿನ ಸ್ನೇಹ ಹೇಗೆ ಹಾಳಾಯಿತು ಎಂದು ಗೊತ್ತೇ ಇದೆ. ಆದರೆ ಇತ್ತೀಚೆಗೆ ದರ್ಶನ್ ಅವರ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ ನಟ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದರು.
ಇದಕ್ಕೆ ನಟ ದರ್ಶನ್ ಧನ್ಯವಾದ ಹೇಳಿದ್ದರು. ಈ ವಿಚಾರ ಅಭಿಮಾನಿಗಳ ನಡುವೆ ದರ್ಶನ್ – ಕಿಚ್ಚ ಇಬ್ಬರು ಮತ್ತೆ ಹಳೆಯ ಸ್ನೇಹಿತರಾಗುತ್ತಾರೆ ಎನ್ನುವ ಗುಸು ಗುಸುಗೆ ಕಾರಣವಾಗಿತ್ತು.
ಈ ವಿಚಾರ ಚರ್ಚೆಯಲ್ಲಿರುವಾಗ ಇತ್ತೀಚೆಗೆ ಸುದೀಪ್, ದರ್ಶನ್ ಹಾಗೂ ರವಿಚಂದ್ರನ್ ಮೂವರು ಒಟ್ಟಾಗಿ ನಿಂತುಕೊಂಡಿರುವ ಸೆಲ್ಫಿ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಫೋಟೋ ನೋಡಿ ಒಗ್ಗಟ್ಟಾಗಿ ದಚ್ಚು – ಕಿಚ್ಚ ಇರುವುದನ್ನು ನೋಡಿ ಸಂತಸ ಪಟ್ಟುಕೊಂಡು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಎಲ್ಲಿಯವರೆಗೆ ಅಂದರೆ ಇದು ಅಸಲಿ ಫೋಟೋವೆಂದೇ ನಂಬುವಷ್ಟರ ಮಟ್ಟಿಗೆ ಇದು ವೈರಲ್ ಆಗಿತ್ತು. ಆದರೆ ಇದೀಗ ಈ ಫೋಟೋವಿನ ಅಸಲಿ ಕಾರಣ ರಿವೀಲ್ ಆಗಿದೆ.
ಅಸಲಿಗೆ ಈ ಫೋಟೋದಲ್ಲಿ ದರ್ಶನ್ ಅವರ ಜಾಗದಲ್ಲಿ ಇರುವುದು ಖ್ಯಾತ ನಿರ್ದೇಶಕ ಜಾಕ್ ಮಂಜು ಅವರು. ಅವರ ಜಾಗದಲ್ಲಿ ಯಾರಿಗೂ ಡೌಟ್ ಬಾರದ ಹಾಗೆ ಅಭಿಮಾನಿಯೊಬ್ಬ ಫೋಟೋ ಎಡಿಟ್ ಮಾಡಿ ದರ್ಶನ್ ಅವರ ಫೋಟೋವನ್ನು ಕೂರಿಸಿದ್ದಾನೆ.
ಈ ಫೋಟೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಕೆಲವರು ಇದನ್ನು ಫೇಕ್ ಎಂದು ಅರ್ಥ ಮಾಡಿಕೊಂಡಿದ್ದಾರೆ. ಫೋಟೋದಲ್ಲಿರುವ ಹಾಗೆ ಇಬ್ಬರು ಒಂದಾಗಿ ಕಾಣಿಸಿಕೊಳ್ಳಬೇಕೆನ್ನವುದು ಅಭಿಮಾನಿಗಳು ಆಸೆ.

